fbpx
ಸಿನಿಮಾ

ರಿಲೀಸ್ ಆಯ್ತು ನೋಡಿ ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರದ ಟ್ರೈಲರ್.

ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಮುಖ್ಯ ಭೂಮಿಕೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟ್ರೈಲರ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದ್ದು ಎಲ್ಲೆಡೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

ಮೇರಿ ಕೋಮ್ ಹಾಗೂ ಸರಬ್ಜಿತ್ ಸಿನಿಮಾಗಳನ್ನು ಮಾಡಿದ್ದ ಒಮಂಗ್ ಕುಮಾರ್ ಮೋದಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದ ಜನವರಿಯಲ್ಲಿ ಗುಜರಾತ್ ನಲ್ಲಿ ಈ ಸಿನಿಮಾ ಆರಂಭವಾಗಿತ್ತು. ಇದೀಗ ಮುಂಬೈನಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಯುತ್ತಿದೆ. ಉತ್ತರಾಖಂಡ್ ನಲ್ಲಿ ಕೂಡ ಸಿನಿಮಾದ ಚಿತ್ರೀಕರಣ ನಡೆದಿದೆ. ಮೋದಿ ಅವರ ಆರಂಭದ ದಿನಗಳು, ರಾಜಕೀಯ ಪಯಣವನ್ನು ಉತ್ತರ ಕಾಶಿ ಜಿಲ್ಲೆಯ ಗಂಗಾ ಘಾಟ್, ಕಲ್ಪ್ ಕೇದಾರ್ ಮಂದಿರ್ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಬೊಮ್ಮನ್ ಇರಾನಿ, ಮನೋಜ್ ಜೋಷಿ, ಪ್ರಶಾಂತ್ ನಾರಾಯಣನ್, ಜರೀನಾ ವಹಾಬ್, ಬರ್ಖಾ ಸೇನ್ ಗುಪ್ತಾ, ಅಂಜನ್ ಶ್ರೀವಾಸ್ತವ್ ಸೇರಿದಂತೆ ಹಲವು ಖ್ಯಾತನಾಮ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ನರೇಂದ್ರ ಮೋದಿ ಚಿತ್ರ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಏಕಕಾಲದಲ್ಲಿ ತೆರಕಾಣುತ್ತಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

‘ಪಿಎಂ ನರೇಂದ್ರ ಮೋದಿ’ ಸಿನಿಮಾ ಏಪ್ರಿಲ್ 12, 2019ರಂದು ದೇಶದಾದ್ಯಂತ ತೆರೆಗೆ ಬರಲಿದೆ. ಚಿತ್ರತಂಡವು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರವನ್ನು, ತೆರೆಯಲ್ಲಿ ಮೋದಿಯವರನ್ನು ನೋಡಲು ದೇಶದ ತುಂಬೆಲ್ಲ ಇರುವ ಸಿನಿಮಾ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.



copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top