ಸಮಾಚಾರ

23.41 ಕೋಟಿ ರೂ. ವೌಲ್ಯದ ಆಸ್ತಿಯ ಒಡತಿ ಸುಮಲತಾ- ಚಿನ್ನ, ನಗದು ಎಷ್ಟಿದೆ ಗೊತ್ತಾ?

ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಭಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ನಟಿ ಸುಮಲತಾ ಅವರು ನಾಮಪತ್ರದಲ್ಲಿ ದಾಖಲಿಸಿರುವ ಆಸ್ತಿ ವಿವರ ಈ ಕೆಳಕಂಡಂತಿದೆ.

ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಇದೆ.

ಹೊಸದಿಲ್ಲಿಯಲ್ಲಿರುವ ಎಸ್‌ಬಿಐ ಖಾತೆ ಸೇರಿದಂತೆ ಐದು ಬ್ಯಾಂಕ್‌ಗಳಲ್ಲಿ 1.31 ಕೊಟಿ ರೂ. ನಗದು ಹಾಗೂ ಠೇವಣಿ ಇದೆ. ಉಳಿತಾಯ ಖಾತೆಯಲ್ಲಿರುವ ನಗದು, ಠೇವಣಿ, ವಿಮೆ, ಷೇರು ಸೇರಿದಂತೆ ಒಟ್ಟಾರೆ 5,68,62,989 ರೂ. ಮೌಲ್ಯದ ಚರಾಸ್ತಿ, ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಒಂದು ಮನೆ, ಉತ್ತರಹಳ್ಳಿಯ ಮನೆ, ಪಾಲುದಾರಿಕೆಯಲ್ಲಿರುವ ಅಪಾರ್ಟ್‌ಮೆಂಟ್ ಸೇರಿದಂತೆ 17,72,91,150 ರೂ. ವೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಕಳೆದ 5 ವರ್ಷಗಳಿಂದ ಸುಮಲತಾ ಅವರು ಅಂಬರೀಷ್​ಗಿಂತ ಹೆಚ್ಚು ದುಡಿದಿದ್ದಾರೆ. 2013ರಿಂದ 2018ರವರೆಗೆ ಅಂಬಿ ಆದಾಯ 81,66,510 ರೂ. ಆಗಿದ್ದರೆ, ಸುಮಲತಾ ಆದಾಯ 4,45,87,717 ರೂ. ಗಳಾಗಿದೆ. ಜತೆಗೆ ಮೈಸೂರಿನ ತ್ರಿಭುವನ್ ಟವರ್ಸ್​ನಲ್ಲಿ ಶೇ.25 ಶೇರು ಇದ್ದು, ಅದರ ಮೌಲ್ಯ 41 ಲಕ್ಷ ರೂಪಾಯಿಯಷ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top