fbpx
ಮನೋರಂಜನೆ

ಪುನೀತ್ ‘ಯುವರತ್ನ’ ಬೈಕ್ ನಂಬರ್ ಸೀಕ್ರೆಟ್ ಏನು ಗೊತ್ತಾ?

ರಾಜಕುಮಾರದಂತಹ ಪರಿಪೂರ್ಣ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಅವರ ಕಾಂಬಿನೇಷನ್ ನಲ್ಲಿ ‘ಯುವರತ್ನ’ ಎಂಬ ಮತ್ತೊಂದು ಕನ್ನಡ ಚಿತ್ರ ಮೂಡಿಬರುತ್ತಿದ್ದು ಈಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಬೆಳೆದುಕೊಳ್ಳುತ್ತಿವೆ.

‘ಯುವರತ್ನ’ ಚಿತ್ರದ ಸ್ಟಿಲ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ರಿವಿಲ್ ಮಾಡಿದ್ದಾರೆ. ಪುನೀತ್ ಸ್ಟೈಲಿಶ್ ಆಗಿ ಬೈಕ್ ಏರಿ ಬರ್ತಿರುವ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಸ್ಟುಡೆಂಟ್ ಲುಕ್ ನಲ್ಲಿ ಅವರು ಭರ್ಜರಿಯಾಗಿ ಕಂಗೊಳಿಸುತ್ತಿದ್ದಾರೆ. ಆದರೆ ಆ ಬೈಕ್ ನಂಬರ್ ಯಾರಾದರೂ ಗಮನಿಸಿದರೆ ಅದರ ಹಿಂದಿರುವ ಪವರ್ ಫುಲ್ ಮೆಸೇಜ್ ತಿಳಿದು ಬರುತ್ತದೆ. KA 01 PS 0029 ಇದು ಪುನೀತ್ ಚಿತ್ರದಲ್ಲಿ ಬಳಸಿರುವ ಬೈಕ್ ನಂಬರ್. ಇದರ ಅರ್ಥ ಇಲ್ಲಿದೆ.

KA- ಕರ್ನಾಟಕ
01 – ನಂಬರ್ 1 ಸ್ಟಾರ್
0029 – ಯುವರತ್ನ ಪುನೀತ್ 29ನೇ ಚಿತ್ರ. ಅಂದರೆ ಕರ್ನಾಟಕದ ನಂಬರ್ 01 ಸ್ಟಾರ್ ಪುನೀತ್ ಅವರ 29ನೇ ಚಿತ್ರ ಯುವರತ್ನ!

16ವರ್ಷಗಳ ನಂತರ ಕಾಲೇಜು ಹುಡುಗನ ಪಾತ್ರದಲ್ಲಿ ಅಪ್ಪು:
‘ಯುವರತ್ನ’ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ನಟಿಸ್ತಿದ್ದಾರೆ. ವಿಶೇಷವೆಂದರೆ 16 ವರ್ಷದ ಬಳಿಕ ಪವರ್ ಸ್ಟಾರ್​ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಾರೆ. ತಮ್ಮ ಆರಂಭದ ಚಿತ್ರಗಳಾದ ಅಪ್ಪು, ಅಭಿ ಸಿನಿಮಾಗಳಲ್ಲಿ ಪುನೀತ್ ಕಾಲೇಜು ಹುಡುಗನಾಗಿ ಮಿಂಚಿದ್ದರು.

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top