fbpx
ಮನೋರಂಜನೆ

ಮತ್ತೆ ಬರ್ತಿದೆ ವೀಕೆಂಡ್ ವಿಥ್ ರಮೇಶ್- ಸೀಸನ್ 4ರ ಮೊದಲ ಅತಿಥಿ, ಯಾರು ಗೊತ್ತಾ

ರಮೇಶ್ ಅರವಿಂದ್ ಮುಖ್ಯ ಸಾರಥ್ಯದಲ್ಲಿ ಮೂಡಿಬರುವ ತುಂಬಾ ಜನಪ್ರಿಯ ಕಾರ್ಯಕ್ರಮವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಬರುತ್ತಿದ್ದು ಆದಷ್ಟು ಬೇಗ ನಾಲ್ಕನೇ ಸೀಸನ್ ಬರುತ್ತಿದೆ. ನಾಲ್ಕನೇ ಸೀಸನ್ ನ ಮೊದಲ ಅತಿಥಿ ಯಾರೆಂದು ಬಹಳ ಕುತೂಹಲ ಇದ್ದೆ ಇರುತ್ತದೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ವೀರೇಂದ್ರ ಹೆಗ್ಗಡೆ ಅವರ ಸಂಚಿಕೆ ಶೂಟಿಂಗ್ ಮುಗಿದಿದ್ದು, ಪ್ರಸಾರಕ್ಕೆ ಸಜ್ಜಾಗಿದೆಯಂತೆ ಎಂದು ವೀಕೆಂಡ್ ವಿತ್ ರಮೇಶ್ ಶೋನ ಆಪ್ತ ಮೂಲಗಳು ತಿಳಿಸಿವೆ.

 

 

ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು. ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಕೊಡುಗೆಗೆ ಜೀ ಕನ್ನಡ ಮೊನ್ನೆಯಷ್ಟೇ ಹೆಮ್ಮೆಯ ಕನ್ನಡಿಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ. ಅವರನ್ನು ಒಮ್ಮೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ನೋಡಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದರು. ಆದರೆ ಕಾರಣಾಂತರಗಳಿಂದ ಅವರಿಗೆ ಬರಲಾಗುತ್ತಿರಲಿಲ್ಲ. ಇದೀಗ ಆಸಮಯ ಒದಗಿ ಬಂದಿದ್ದು ಹೆಗಡೆಯವರ ಸಾದನೆಗಳು ಸಂಚಿಕೆಯಲ್ಲಿ ತೆರೆದಿಟ್ಟುಕೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top