fbpx
ದೇವರು

ಯುಗಾದಿ ಹಬ್ಬ ಎಂದರೆ ಏನು? ಅದನ್ನು ನಾವು ಯಾಕೆ ಆಚರಣೆ ಮಾಡಬೇಕು? ಮಹತ್ವ ತಿಳ್ಕೊಳಿ

ಇದು ವಸಂತ ಋತುವಿನ ಕಾಲ ಎಲ್ಲರು ಈ ಹಾಡನ್ನು ಕೇಳಿರುತ್ತೇವೆ “ವಸಂತ ಮಾಸ ಮಾಸ ಬಂದಾಗ ಮಾವು ಚಿಗುರಲೇ ಬೇಕು , ಕೋಗಿಲೆ ಹಾಡಲೇ ಹಾಡಲೇ ಬೇಕು” ಎಂದು ಅಲ್ಲವೇ ?
ಚೈತ್ರ ಶುಕ್ಲ ಪ್ರತಿಪದೆ ಯಂದು ನಾವು ಯುಗಾದಿ ಆದಿ ಯುಗಾದಿ ಯನ್ನು ಆಚರಿಸುತ್ತೇವೆ ವೈಜ್ಞಾನಿಕ ಕಾರಣಗಳು ಹಾಗು ಧಾರ್ಮಿಕ ಕಾರಣಗಳಿವೆ ,
ಹೌದು ಇದು ಹಳೆ ಎಳೆಗಳು ಉದುರಿ ಮತ್ತೆ ಮರ ಗಿಡಗಳಲ್ಲಿ ಹಸುರು ಮೂಡುವ ಕಾಲ , ಮನಸಿನ ಅಂಧಕಾರವ ಕಳೆದು ಮರುಜೀವ ಹುಟ್ಟುವ ಕಾಲ.

 

ವೈಜ್ಞಾನಿಕ ಕಾರಣಗಳು ?

ಸೂರ್ಯನು ಮಕರ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಇದನ್ನು ಸಂಪಾತಬಿಂದು ಎಂದು ಕರೆಯಲಾಗುತ್ತದೆ, ಶಿಶಿರ ಋತುವಿನಲ್ಲಿ ಉದುರಿಹೋಗಿದ್ದ ಹಣ್ಣೆಲೆಗಳು ಮತ್ತೆ ಚಿಗುರೊಡೆಯಲು ಶುರುವಾಗುತ್ತದೆ , ಫೆಬ್ರವರಿ ತಿಂಗಳಿನಲ್ಲಿ ಉಂಟಾದ ಬಿಸಿಲಿಗಿಂತ ಸ್ವಲ್ಪ ತಂಪಾದ ಅಥವಾ ಚೇತೋಹಾರಿ ವಾತಾವರಣ ವಸಂತ ಮಾಸದಲ್ಲಿ ಇರುತ್ತದೆ.

 

 

ಇದು ಭೂಮಿಯ ಮೇಲಿನ ಗಿಡ ಮರಗಳ ಉತ್ಪತಿಯ ಕಾಲವಾಗಿದೆ ಆದ್ದರಿಂದಲೇ ಇದನ್ನು ಯುಗಾದಿ + ಆದಿ= ಯುಗಾದಿ ಎಂದು ಕರೆಯಲಾಗುತ್ತದೆ.

ಧಾರ್ಮಿಕ ಕಾರಣಗಳು ?

ಶ್ರೀರಾಮನು ವಾಲಿಯನ್ನು ಯುದ್ಧದಲ್ಲಿ ಸೋಲಿಸಿ ವಿಜಯ ಪತಾಕೆ ಹಾರಿಸಿದ ದಿನ ಇದು ಶಾಲಿವಾಹನ ಶಕೆಯ ಪ್ರಾರಂಭ ದಿನ.

ಸೃಷ್ಟಿಕರ್ತ ಬ್ರಹ್ಮನು ಜಗತ್ತನ್ನು ಇದೆ ದಿನ ಸೃಷ್ಟಿಸಿದನು ಎಂದು ಹೇಳಲಾಗುತ್ತದೆ .

ಜೀವ ಕೋಶಗಳಲ್ಲಿ ನವ ಜೀವ ಚೈತನ್ಯ ಹೊಂದುವುದು ಇದೆ ದಿನ ಎಂದು ಹೇಳಲಾಗುತ್ತದೆ, ಚೇತೋಹಾರಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿರುತ್ತದೆ . ತೇಜ ಮತ್ತು ಪ್ರಜಾಪತಿ ತರಂಗಗಳು ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top