fbpx
ಕ್ರಿಕೆಟ್

ಗಾಯಗೊಂಡಿರೊ ಸಿಂಹ ಇಂದು ಕೆಕೆಆರ್​ ವಿರುದ್ಧ ಕಾದಾಟ- ಗೆದ್ದರೆ ಮಾತ್ರ ಉಳಿಗಾಲ

ಈ ಸಲ ಕಪ್ ನಮ್ದೆ ಅಂತಾ ಹೇಳುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಸತತ ನಾಲ್ಕನೇ ಸೋಲಿಗೆ ಗುರಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತೀವ್ರ ಮುಖಭಂಗಕ್ಕೊಳಗಾಗಿದೆ. ಐಪಿಎಲ್‌ನಲ್ಲಿ ಚೊಚ್ಚಲ ಕಿರೀಟದ ಗುರಿಯನ್ನಿರಿಸಿರುವ ಆರ್‌ಸಿಬಿ ಟೂರ್ನಿಯ ಇತಿಹಾಸದಲ್ಲೇ ಅತಿ ಕೆಟ್ಟ ಆರಂಭವನ್ನು ಪಡೆದಿದೆ.

ಇಂಥಾ ಆರ್ಸಿಬಿ ತಂಡ ಇಂದು ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಕೆಕೆಆರ್ ವಿರುದ್ಧ ಕಾದಾಟ ನಡೆಸಲಿದೆ. ತನ್ನ 5ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ವಿರುದ್ಧ ಶತಾಯಗತಾಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಾದಾಡಲಿದೆ. ಆರ್‌ಸಿಬಿ, ಸವಿಸವಿ ನೆನಪಿನೊಂದಿಗೆ ನವ ಸಂವತ್ಸರಕ್ಕೆ ಅಡಿ ಇಡುವುದೋ ಅಥವಾ ಕಹಿ ನೆನಪಿನೊಂದಿಗೆ ಮುಂದುವರಿಯುವುದೋ ಎಂಬುದನ್ನು ಕಾದು ನೋಡಬೇಕಿದೆ.

ಆರ್‌ಸಿಬಿ ಹಿಂದಿನ ಎಲ್ಲ ನೋವನ್ನು ಮರೆತು ತನ್ನ ಮುಂದಿನ ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸುತ್ತಾ ಹೋದರೆ ಪ್ಲೆ ಆಫ್ಗೇರುವ ಸಾಧ್ಯತೆ ಇದೆ. ಆದರೆ ಆರ್‌ಸಿಬಿ ಬ್ಯಾಟ್ಸ್‌ಮನ್‌, ಬೌಲರ್ ಮೈ ಚಳಿ ಬಿಟ್ಟು ಆಡಬೇಕು ಅಷ್ಟೆ. ಆದರೆ ತಾವು ಎದುರಾಊ ಆಡುತ್ತಿರುವ ಕೆಕೆಆರ್ ತಂಡವು ಬಲಿಷ್ಠವಾಗಿದ್ದು ತನ್ನ ಮೊದಲೆರಡು ಪಂದ್ಯದಲ್ಲಿ ಕ್ರಮವಾಗಿ ಹೈದ್ರಾಬಾದ್‌, ಪಂಜಾಬ್‌ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಡೆಲ್ಲಿ ವಿರುದ್ಧದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಸೂಪರ್‌ ಓವರ್‌ನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಜಯ ಸಾಧಿಸಿತ್ತು. ಸದ್ಯ ಸೋಲಿನ ಟ್ರ್ಯಾಕ್ ನಲ್ಲಿರುವ ಕೆಕೆಆರ್ ಆರ್ಸಿಬಿ ವಿರುದ್ದದ ಪಂದ್ಯದ ಮೂಲಕ ಗೆಲುವಿನ ಟ್ರ್ಯಾಕ್ ಗೆ ಮರಳಲು ಯೋಜಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top