fbpx
ಮನೋರಂಜನೆ

ಇವರೇ ಮೇಘನಾಗೆ ಮಧ್ಯರಾತ್ರಿಯಲ್ಲಿ ಸಿಕ್ಕ ರಿಯಲ್ ಲೈಫ್ ಹೀರೋ- ಆತ ಮಾಡಿದ ಉಪಕಾರವೇನು ಗೊತ್ತಾ?

ನಟಿ ಮೇಘನಾ ಗಾಂವ್ಕರ್ ಮಧ್ಯರಾತ್ರಿಯಲ್ಲಿ ತಮಗೆ ಸಿಕ್ಕ ರಿಯಲ್ ಲೈಫ್ ಹೀರೋನನ್ನು ಪರಿಚಯಿಸಿದ್ದಾರೆ. ಮೇಘನಾ ಆ ವ್ಯಕ್ತಿಯ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ನಿಜ ಜೀವನದ ಹೀರೋ ಎಂದು ಬರೆದುಕೊಂಡಿದ್ದಾರೆ.

 

 

ಪೋಸ್ಟ್ ನಲ್ಲಿ ಏನಿದೆ?
ಅಣ್ಣನನ್ನು ಮೀಟ್ ಮಾಡಿ.(ಇದು ಅವರ ನಿಜವಾದ ಹೆಸರು). ನಿಜ ಜೀವನದ ಹೀರೋ.

ಒಂದು ದಿನ ರಾತ್ರಿ ನಾನು ನನ್ನ ಕಾರನ್ನು ಪಾರ್ಕ್ ಮಾಡಿ ಅಲ್ಲೇ ಹತ್ತಿರದಲ್ಲಿ ಇದ್ದ ಥಿಯೇಟರ್ಗೆ ಚಿತ್ರ ನೋಡಲು ಹೋದೆ. ಸಿನಿಮಾ ನೋಡಿ ಹಿಂತಿರುಗಿ ಬಂದಾಗ ತುಂಬ ಕತ್ತಲಾಗಿತ್ತು. ಅಲ್ಲದೆ ಅಣ್ಣ ನನ್ನ ಕಾರಿನ ಬಳಿ ನನಗಾಗಿ ಕಾಯುತ್ತಿದ್ದರು. ನಾನು ಪಾರ್ಕಿಂಗ್ ಶುಲ್ಕ ಕೊಟ್ಟಿದ್ದೇನೆ ಆದರೂ ಇವರು ಯಾಕೆ ಇಲ್ಲಿ ನಿಂತಿದ್ದಾರೆ ಎಂದು ಯೋಚಿಸುತ್ತಿದ್ದೆ. ಬಳಿಕ ನಾನು ನನ್ನ ಕಾರಿನ ಕಿಟಕಿಯನ್ನು ಅರ್ಧ ತೆರೆದಿರುವುದನ್ನು ಗಮನಿಸಿದೆ. ನಾನು ಕಾರಿನ ಕಿಟಕಿ ಅರ್ಧ ತೆರೆದಿದ್ದಾಗ ಕೆಲವರು ಆ ಸಮಯವನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಈ ವ್ಯಕ್ತಿ ನನಗಾಗಿ ನನ್ನ ಕಾರಿನ ಬಳಿ ಸುಮಾರು 3-4 ಗಂಟೆಯವರೆಗೂ ಕಾಯುತ್ತಿದ್ದರು.

ಪಾರ್ಕಿಂಗ್ ವ್ಯಕ್ತಿಯ ಪ್ರಾಮಾಣಿಕತೆ ಮೆಚ್ಚಿದ ಮೇಘನಾ ಅವರಿಗೆ ಥ್ಯಾಂಕ್ಸ್​ ಹೇಳಿದ್ದಲ್ಲದೇ, ಅವರ ಜೊತೆ ಮಧ್ಯರಾತ್ರಿ ಒಂದು ಪೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. “ನಾನು ಈ ವ್ಯಕ್ತಿಗೆ ಧನ್ಯವಾದ ತಿಳಿಸಿ ಹಣ ನೀಡಲು ಮುಂದಾದೆ. ಆದರೆ ಅವರು ಹಣವನ್ನು ಬೇಡ ಅಂದರು. ಈ ಘಟನೆ ನಡೆದು ಈಗ ಮೂರು ವರ್ಷವಾಗಿದೆ. ನಾನು ಈಗಲೂ ಆ ಸ್ಥಳಕ್ಕೆ ಹೋದಾಗ ಅದೇ ಜಾಗದಲ್ಲೇ ಕಾರು ಪಾರ್ಕ್ ಮಾಡುತ್ತೇನೆ. ಕಾರು ಪಾರ್ಕ್ ಮಾಡಿದ್ದಾಗ ಕಿಟಕಿ ಕ್ಲೋಸ್ ಇದೆಯಾ ಎಂಬುದನ್ನು ಚೆಕ್ ಮಾಡುತ್ತೇನೆ.

ಇದು ಸಣ್ಣ ವಿಷಯ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ಈ ವ್ಯಕ್ತಿಯ ಒಳ್ಳೆಯ ಹೃದಯ, ಪ್ರಾಮಾಣಿಕತೆ ನೋಡಿದರೆ, ಈ ಜಗತ್ತಿನಲ್ಲಿ ಏನೂ ಬಯಸದೇ ನಿರ್ಮಲ ಮನಸಿನ ಜನರು ಕೂಡ ಇದ್ದಾರೆ ಎಂದು ಅನಿಸುತ್ತದೆ. ನಾವಿಬ್ಬರು ಈಗ ಒಳ್ಳೆಯ ಸ್ನೇಹಿತರಾಗಿದ್ದೇವೆ. ಈ ವ್ಯಕ್ತಿ ನನಗೆ ಸ್ನೇಹಿತರಾಗಿದ್ದಾರೆ ಎಂಬುದು ನನಗೆ ಹೆಮ್ಮೆ ವಿಷಯ. ಕಳೆದ ವಾರ ಆ ವ್ಯಕ್ತಿ ಜೊತೆ ಫೋಟೋ ತೆಗೆದುಕೊಳ್ಳೋಣ ಎಂದು ಕೇಳಿದೆ. ಆಗ ಅವರು ಸರಿ ಎಂದು ಹೇಳಿ ಫೋಟೋಗೆ ಪೋಸ್ ನೀಡಿದರು.. ನಾನು ಮೊದಲ ಬಾರಿಗೆ ಒಬ್ಬ ವ್ಯಕ್ತಿ ಜೊತೆ ಫೋಟೋ ಕೇಳಿದರೆ ಅದು ಇವರ ಜೊತೆಗೆ ಮಾತ್ರ ಎಂದು ಮೇಘನಾ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಥ ರಿಯಲ್​​ ಹೀರೋಗಳು ಅಪರೂಪಕ್ಕೆ ಸಿಗುತ್ತಾರೆ ಎಂಬಂರ್ಥದಲ್ಲಿ ಮೇಘನಾ ಪೋಸ್ಟ್​ ಹಾಕಿಕೊಂಡಿದ್ದು, ಮೇಘನಾ ಅಭಿಮಾನಿಗಳು ಕೂಡ ಆತನಿಗೆ ಥ್ಯಾಂಕ್ಸ್​ ಹೇಳಿದ್ದಾರೆ. ಇದೀಗ ಮೇಘನಾ ತನಗೆ ಸಹಾಯ ಮಾಡಿದ ವ್ಯಕ್ತಿಯ ಜೊತೆ ತೆಗೆಸಿಕೊಂಡ ಪೋಟೋ ಸಖತ್ ವೈರಲ್​ ಆಗಿದ್ದು, ಜನ ಇನ್ನೂ ಜಗತ್ತಿನಲ್ಲಿ ಒಳ್ಳೆಯವರು ಇದ್ದಾರೆ ಅಂತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top