fbpx
ಸಮಾಚಾರ

ತೇಜಸ್ವಿ ಸೂರ್ಯನ ಪ್ರೇಮ ಪುರಾಣವನ್ನು ಬಿಚ್ಚಿಟ್ಟ ಕವಿತಾ ರೆಡ್ಡಿ- ವಿಡಿಯೋ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಇತ್ತೀಚಿಗೆ ಮೀಟೂ ಆರೋಪ ಕೇಳಿಬಂದಿತ್ತು. ಉದ್ಯಮಿ ಡಾ.ಸೋಮ್‌ ದತ್ತಾ ಸರಣಿ ಟ್ವೀಟ್ ಮೂಲಕ ತೇಜಸ್ವಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. “5 ವರ್ಷಗಳ ಕಾಲ ನಾನು ಆತನ ಕೈಯಲ್ಲಿ ನರಳಿದೆ. ನನ್ನ ಪ್ರೀತಿ ಕುರುಡಾಗಿತ್ತು ಮತ್ತು ನನ್ನನ್ನು ನಂಬಿ ನಾನು ಆತನ ಮೊದಲ ಸಂತ್ರಸ್ತೆಯೂ ಅಲ್ಲ ಕೊನೆಯವಳೂ ಅಲ್ಲ” ಎಂದು ಸೋಮ್ ದತ್ತಾ ಹೇಳಿದ್ದರು.

ಇದೀಗ ಕಾಂಗ್ರೆಸ್ ಮುಖಂಡೆ ಕವಿತಾ ರೆಡ್ಡಿ ತೇಜಸ್ವಿ ಅವರ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು ಈ ವಿಡಿಯೋಗಳಲ್ಲಿ ತೇಜಸ್ವಿ ಜೊತೆ ಆ ಯುವತಿ ಕೂಡ ಇದ್ದಾರೆ ತೇಜಸ್ವಿ ಐ ಲವ್ ಯೂ.” ಎಂದು ಹೇಳುತ್ತಾರೆ.

ವಿಡಿಯೋ ಇಲ್ಲಿ ನೋಡಿ.

ಅಲ್ಲದೆ ತೇಜಸ್ವಿ ಸೂರ್ಯ ಅವರಿಗೆ ಬೆಂಬಲಿಸಿ ಟ್ವೀಟ್ ಮಾಡಿದ್ದವರೊಬ್ಬರಿಗೆ ಸೋಮ್ ದತ್ತಾ ಪ್ರತಿಕ್ರಿಯಿಸಿ, ಮಹಿಳೆಯನ್ನು ಶೋಷಿಸುವ ಹಾಗೂ ಹೆಣ್ಣಿನ ಮೇಲೆ ಹಲ್ಲೆ ಮಾಡುವ ವ್ಯಕ್ತಿ ನಮ್ಮ ನಾಯಕನಾಗಲು ನೀವು ಬಯಸುತ್ತೀರಾ ಎಂದು ಕೇಳಿದ್ದಾರೆ.

 

 

ಪ್ರತಿಯೊಬ್ಬ ಹಿಂದೂ ಸಹ ಧಾರ್ಮಿಕ ವ್ಯಕ್ತಿಯಲ್ಲ ಹಾಗೂ ಆತನ ಭಾಷಣಗಳು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದಿಲ್ಲ ಎಂದು ಹೇಳಿರುವ ಸೋಮ್ ದತ್ತಾ, ನಿಮಗೆ ಸಾಕ್ಷಿ ಬೇಕಾದರೆ ನಾನು ಒದಗಿಸುತ್ತೇನೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರಿಗೂ ಪ್ರತಿಕ್ರಿಯಿಸಿರುವ ಸೋಮ್ ದತ್ತಾ, ಆತನಿಗೆ ನಾನು ಮೊದಲ ಸಂತ್ರಸ್ತೆ ಯಲ್ಲ ಅಥವಾ ಕೊನೆಯವಳೂ ಅಲ್ಲ ಎಂದು ಹೇಳಿಕೊಂಡಿದ್ದಾರೆ.

 

 

ಸೋಮ್ ದತ್ತಾ ಅವರ ಟ್ವೀಟ್‌ಗಳು ರಾಜಕೀಯ ತಿರುವು ಪಡೆಯುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ. ಆದರೆ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬಿಜೆಪಿಯಿಂದ ಎಂಥಾ ಅಭ್ಯರ್ಥಿಯ ಆಯ್ಕೆ?, ‘ಹೆಣ್ಣಿಗೆ ಅನ್ಯಾಯ, ಮಿಟೂ’ ಎಂದು ಬರೆದು ಅನೇಕರು ತೇಜಸ್ವಿ ಹಾಗೂ ಸೋಮ್‌ ದತ್ತಾ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಿದ್ದಾರೆ.

 

 

 

 

ಸೋಮ್‌ ಅವರು ತಮ್ಮ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದರೂ ಸೋಮ್‌ ದತ್ತಾ ಅವರನ್ನು ಪದೇ ಪದೇ ಟ್ಯಾಗ್‌ ಮಾಡಿ ವಿಷಯ ಪ್ರಸ್ತಾಪಿಸುತ್ತಿರುವ ಟ್ವೀಟಿಗರಿಗೆ, ಇಲ್ಲಿಗೆ ಸಾಕು ಮಾಡುವಂತೆ ಮನವಿ ಮಾಡಿದ್ದಾರೆ.. ಇದೆಲ್ಲಾ ಪ್ರಚಾರದ ಗಿಮಿಕ್ ಎಂದು ಮೂಗು ಮಿರಿಯುವ ಜನರಿಗೆ ಟಾಂಗ್ ಕೊಟ್ಟಿರುವ ಸೋಮ್ ‘ ನನಗೆ ಈಗಾಗಲೇ ಸಾಕಷ್ಟು ಜನಮನ್ನಣೆ ಇದೆ. ಪ್ರಚಾರ ಅಪೇಕ್ಷಿಸುವ ಸಾಮಾನ್ಯ ಹುಡುಗಿ ನಾನಲ್ಲ.. ನಾನು ಕೂಡ ಒಬ್ಬ ಮಹಿಳೆ ಹಾಗೂ ನನಗೆ ಆದ ಅನ್ಯಾಯವನ್ನು ಹೇಳಿಕೊಳ್ಳುವ ಹಕ್ಕಿದೆ. ನಾನು ಪ್ರೀತಿ ಮತ್ತು ನೋವು ಎರಡನ್ನೂ ಅನುಭವಿಸುತ್ತೇನೆ. ನಾನು ಈಗ ಮಾತನಾಡುತ್ತಿದ್ದೇನೆ ಎಂದ ಮಾತ್ರಕ್ಕೆ ಎಲ್ಲರೂ ನನ್ನ ಕಡೆಗೆ ಗಮನ ಹರಿಸುತ್ತಾರೆ ಎಂದಲ್ಲ. ನನಗೂ ದನಿಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ದಯಮಾಡಿ ಅದನ್ನು ಗೌರವಿಸಿ’ ಎಂದು ಬರೆದುಕೊಂಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top