fbpx
ಸಮಾಚಾರ

7 ಬಾರಿ ತಲೆ ಮೇಲೆ ಲೇಸರ್-ಸ್ನೈಪರ್ ಗನ್​ ಬಳಸಿ ರಾಹುಲ್ ಗಾಂಧಿ ಹತ್ಯೆಗೆ ಸಂಚು? ರಕ್ಷಣೆ ಕೋರಿದ ಕಾಂಗ್ರೆಸ್

ಇಂದಿರಾ ಗಾಂಧಿ, ರಾಜೀವ್ ಗಾಂಧಿಗೆ ಅಷ್ಟು ರಕ್ಷಣೆಯಿದ್ದರೂ, ಗುಪ್ತ ದಳ ವರದಿಯಿದ್ದರೂ ಅವರನ್ನು ಹತ್ಯೆ ಮಾಡಲಾಗಿತ್ತು. ಇದೀಗ ರಾಹುಲ್ ಗಾಂಧಿಗೂ ಜೀವ ಬೆದರಿಕೆಯಿದೆ ಎಂದು ಕಾಂಗ್ರೆಸ್ ಪಕ್ಷವು ಆಘಾತಕಾರಿ ಹೇಳಿಕೆ ನೀಡಿದೆ. ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಏಳು ಬಾರಿ ಅವರ ತಲೆಯ ಮೇಲೆ ಹಸಿರು ಬಣ್ಣದ ಲೇಸರ್ ಹರಿದಾಡಿದ್ದು, ಇದು ಸ್ನೈಪರ್ ಗನ್‌ನಿಂದ ಆಗಿರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಹೇಳಿದೆ.

 

 

 

ಈ ಬಗ್ಗೆ ಸ್ವತಃ ಕಾಂಗ್ರೆಸ್​ ನಾಯಕರೇ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಪತ್ರ ಬರೆದು ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿಯವರ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ರಾಹುಲ್​ ಗಾಂಧಿ ಹಣೆಯ ಮೇಲೆ ಲೇಸರ್​ ಕಿರಣಗಳು ಏಳು ಬಾರಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲೇಸರ್​ ಕಿರಣಗಳನ್ನು ಸ್ನೈಪರ್​ಗಳಲ್ಲಿ ಬಳಕೆ ಮಾಡುತ್ತಾರೆ. ಇದರಿಂದ ನಿಗದಿತ ಗುರಿಯನ್ನು ದೂರದಿಂದ ತಲುಪಲು ಸಾಧ್ಯವಾಗುತ್ತದೆ.

ಲೇಸರ್ ಗ್ರೀನ್ ಲೈಟ್ ರಾಹುಲ್ ಗಾಂಧಿ ಅವರ ತಲೆ ಮೇಲೆ ಸುಮಾರು 7 ಬಾರಿ ಅತಿ ಕಡಿಮೆ ಅವಧಿಯಲ್ಲಿ ಬಿದ್ದಿರುವುದು ದೃಢವಾಗಿದೆ. ಅಲ್ಲದೇ ದೇವಾಲಯದ ಭೇಟಿ ಸಂದರ್ಭದಲ್ಲಿ ಅವರ ಎಡಭಾಗದ ತಲೆ ಮೇಲೆ 2 ಬಾರಿ ಲೇಸರ್ ಬೆಳಕು ಕಾಣಿಸಿತ್ತು ಎಂದು ವಿವರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಕೂಡ ಕಾಂಗ್ರೆಸ್ ಗೃಹ ಸಚಿವಾಲಯಕ್ಕೆ ಪತ್ರದೊಂದಿಗೆ ನೀಡಿದೆ. ಈ ಪತ್ರದಲ್ಲಿ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಹಿ ಇದೆ.

ಮೇಲ್ನೋಟಕ್ಕೆ ಈ ಆರೋಪ ಗಂಭೀರ ಸ್ವರೂಪದ್ದೇ ಎಂದೆನಿಸುತ್ತದೆ. ಯಾಕೆಂದರೆ ರಾಹುಲ್​ ಗಾಂಧಿ ಕುಟುಂಬದಲ್ಲಿ ಹತ್ಯೆಗೆ ಗುರಿಯಾಗಿರುವ ಜ್ವಲಂತ ಉದಾಹರಣೆಗಳಿವೆ. ಇಂದಿರಾ ಗಾಂಧಿಯವರನ್ನು ಅವರದ್ದೇ ಅಂಗರಕ್ಷಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ಅದಾದ ನಂತರ ಎಲ್​ಟಿಟಿಇ ಕೆಂಗಣ್ಣಿಗೆ ಗುರಿಯಾಗಿದ್ದ ರಾಜೀವ್​ ಗಾಂಧಿಯವರನ್ನು ಆತ್ಮಾಹುತಿ ಬಾಂಬ್​ ದಾಳಿಯ ಮೂಲಕ ಹತ್ಯೆ ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top