ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದು ನೆನ್ನೆ ತಮಿಳು ನಾಡಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ತಮಿಳುನಾಡಿನಲ್ಲಿ ತಮಿಳರನ್ನು ಹಾಡಿ ಹೊಗಳಿರುವ ರಾಹುಲ್ ಮೋದಿಯನ್ನು ಕಟುವಾಗಿ ಟೀಕಿಸಿದ್ದಾರೆ.
“ಮೋದಿ ಅವರಿಗೆ ತಮಿಳುನಾಡಿನ ಬಗ್ಗೆ ಕಲ್ಪನೆಯಿಲ್ಲ. ತಮಿಳು ಇತಿಹಾಸದ ಬಗ್ಗೆ ಏನೂ ಗೊತ್ತಿಲ್ಲ. ಅವರು ತಮಿಳು ಭಾಷೆಯನ್ನು ಕೂಡ ಅರ್ಥಮಾಡಿಕೊಳ್ಳುವುದಿಲ್ಲ,. ಅವರು ಖಂಡಿತವಾಗಿ ತಮಿಳು ಆತ್ಮವನ್ನು ಅರ್ಥಮಾಡಿಕೊಳ್ಳುವುದಿಲ್ಲ, ತಮಿಳರು ಮೋದಿಯ ದ್ವೇಷ ಮತ್ತು ಕೋಪಕ್ಕೆ ಒಲಿಯುವುದಿಲ್ಲ. ಪ್ರೀತಿಗೆ ಮಾತ್ರ ತಮಿಳರು ಸೋಲುತ್ತಾರೆ ಎಂದು ಹೇಳಿದ್ದಾರೆ.
I’m going to send the PM a book of Mr. Periyar & few books of Karunanidhiji, because the gentleman has no idea what Tamil Nadu is – CP @RahulGandhi#NammaThalaivarRahulGandhi pic.twitter.com/zbEfXZbEO3
— Congress (@INCIndia) April 12, 2019
ತಮಿಳುನಾಡಿನ ಜನರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾಜದ ಸುಧಾರಕ ಪೆರಿಯಾರ್ ಅವರ ಪುಸ್ತಕಗಳನ್ನ ಮತ್ತು ಕರುಣಾನಿಧಿ ಅವರ ಪುಸ್ತಕಗಳನ್ನು ಕಳುಹಿಸುವುದಾಗಿ ರಾಹುಲ್ ಹೇಳಿದರು. ಆದರೆ ಕರ್ನಾಟಕದಲ್ಲಿ ರಾಹುಲ್ ಯಾವತ್ತೂ ಕರ್ನಾಟಕದ ಇತಿಹಾಸ, ಸಮಾಜ ಸುಧಾರಕರು ಮತ್ತು ಕನ್ನಡಿಗರ ಬಗ್ಗೆ ಹೊಗಳಿಲ್ಲ ಹಾಗಾಗಿ ರಾಹುಲ್ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
