ಕ್ರಿಕೆಟ್

ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ- ಸ್ಥಾನ ಗಿಟ್ಟಿಸಿಕೊಂಡ ಸ್ಮಿತ್ ಮತ್ತು ವಾರ್ನರ್.

ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಆರೋನ್ ಫಿಂಚ್ ಗೆ ನಾಯಕನ ಪಟ್ಟ ನೀಡಲಾಗಿದೆ. ಅಚ್ಚರಿ ಬೆಳವಣಿಗೆ ಎಂಬಂತೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೊಳಗಾಗಿದ್ದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಹೌದು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಾಜಿ ಸ್ಟೀವ್ ಸ್ಮಿತ್ ಹಾಗೂ ಉಪ ನಾಯಕಕ ಡೇವಿಡ್ ವಾರ್ನರ್ ರನ್ನು ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಮತ್ತೆ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.

 

 

ವಿಶ್ವಕಪ್ ಗೆ ಟೀಂ ಆಸ್ಟ್ರೇಲಿಯಾ ಇಂತಿದೆ :
ಆರೋನ್ ಫಿಂಚ್ (ನಾಯಕ),
ಉಸ್ಮಾನ್ ಖ್ವಾಜಾ,
ಡೇವಿಡ್ ವಾರ್ನರ್,
ಸ್ಟಿವ್ ಸ್ಮಿತ್,
ಶಾನ್ ಮಾರ್ಷ್,
ಗ್ಲೇನ್ ಮ್ಯಾಕ್ಸ್ ವೆಲ್,
ಮಾರ್ಕಸ್ ಸ್ಟೋಯಿನಿಸ್,
ಅಲೆಕ್ಸ್ ಕೇರಿ,
ಪ್ಯಾಟ್ ಕಮ್ಮಿನ್ಸ್,
ಮಿಚೆಲ್ ಸ್ಟಾರ್ಕ್,
ಜೇಯ್ ರಿಚರ್ಡ್ ಸನ್ ,
ನಾಥಾನ್ ಕೌಲ್ಟರ್ ನೈಲ್
ಜಾಸನ್ ಬೆಹ್ರಾನ್ ಡ್ರಾಫ್,
ನಾಥಾನ್ ಲೈನ್,
ಆಡ್ಯಮ್ ಜಂಪಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top