ಸಮಾಚಾರ

“ಅವನ್ಯಾವನೋ ಯಶ್ ಅಂತೆ, ಇವನಿಗಿನ್ನೂ ಗೊತ್ತಿಲ್ಲ, ” ಧಮ್ಕಿ ಹಾಕಿದ ಸಿಎಂ ಹೆಚ್‌ಡಿಕೆ.

ಈ ಸಲ ಮಂಡ್ಯ ಲೋಕಸಭೆ ಕ್ಷೇತ್ರ ತೀರಾ ಕುತೂಹಲ ಮೂಡಿಸಿದೆ. ಒಂದು ಕಡೆ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಚುನಾವಣೆಗೆ ಅಭ್ಯರ್ಥಿಯ ಸ್ಥಾನದಲ್ಲಿ ಮಂಡ್ಯದಲ್ಲಿ ಭಾಗವಹಿಸಿದರೆ, ಇನ್ನೊಂದು ಕಡೆ ಮುಖ್ಯಮಂತ್ರಿಯ ಮಗ ನಿಖಿಲ್ ಕುಮಾರ್ ಸ್ವಾಮಿ ಕೂಡ ಅದೇ ಜಾಗಕ್ಕೆ ಸುಮಲತಾ ಅವರಿಗೆ ಪೈಪೋಟಿ ನೀಡುತ್ತಿದ್ದಾರೆ.. ಜಿದ್ಧಾ ಜಿದ್ದಿ ಕಣವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಹಾಗೂ ಜೆಡಿಎಸ್​ ನಡುವೆ ರಾಜಕೀಯ ತಾರಕಕ್ಕೇರುತ್ತಿದೆ.

ಜಿಲ್ಲೆಯ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ರಾಕಿಂಗ್ ಸ್ಟಾರ್ ಯಶ್ ವಿರುದ್ದದ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾನು ಕಲಾವಿದರೂ ಅಂತಾ ಗೌರವ ಕೊಟ್ಟಿದ್ದಕ್ಕೆ, ನನ್ನ ಪಕ್ಷ ಕಳ್ಳರ ಪಕ್ಷ ಅಂತಾ ಹಳ್ಳಿಗಳ ಕಡೆ ಬಂದು ಹೇಳುತ್ತಾನೆ. ನನ್ನ ಕಾರ್ಯಕರ್ತರು ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ನಮ್ಮ ಕುಮಾರಸ್ವಾಮಿಗೆ ತೊಂದರೆ ಆಗಬಾರದು ಅಂತಾ ಇಲ್ಲದಿದ್ದರೆ ನಿಮ್ಮ ಗತಿ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಾನು ಒಬ್ಬ ನಿರ್ಮಾಪಕನೇ. ಇಂತವರನ್ನು ಹಾಕಿಕೊಂಡು ನಾನು ಸಿನಿಮಾ ಮಾಡಿದ್ದೇನೆ. ನನ್ನಂತ ನಿರ್ಮಾಪಕರು ಇಲ್ಲದಿದ್ದರೆ ಇವರು ಏನು ಮಾಡುತ್ತಾರೆ. ಸಿನಿಮಾದಲ್ಲಿ ಹೇಳಿದಂತೆ ನಾಲ್ಕು ಡೈಲಾಗ್ ಹೊಡೆದು ಸುಮ್ಮನೆ ಹೋಗುತ್ತಾರೆ. ನಾನು ಕಲಾವಿದರು ಎಂದು ಗೌರವ ಕೊಟ್ಟು ಮಾತನಾಡಿದ್ದೇನೆ ಎಂದೆಲ್ಲಾ ಟೀಕಾ ಪ್ರಹಾರ ನಡೆಸಿದರು.

ನಾನು ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ. ಈಗಲೇ ನಾನು ಎಂಪಿ ಆಗಿದ್ದೇನೆ ಎಂದು ನಿಮ್ಮ ತಲೆಯಲ್ಲಿ ತುಂಬಿಬಿಟ್ಟಿದ್ದಾರೆ. ಮಾಧ್ಯಮದವರೂ ಸಹ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಪಣತೊಟ್ಟಿದ್ದಾರೆ. ನಾನು ಇರುವುದು ಮಾಧ್ಯಮದವರಿಂದ ಅಲ್ಲ, ಜನರಿಂದ. ನಾನು ಜನರಿಗೆ ಹೆದರುತ್ತೇನೆ ಹೊರತು ಮಾಧ್ಯಮಕ್ಕೆ ಅಲ್ಲ ಎಂದು ಕಿಡಿಕಾರಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top