fbpx
ಸಮಾಚಾರ

“ಅವನ್ಯಾವನೋ ಯಶ್ ಅಂತೆ,” ಎಂದು ಧಮ್ಕಿ ಹಾಕಿದ್ದ HDKಗೆ ಭರ್ಜರಿ ತಿರುಗೇಟು ಕೊಟ್ಟ ಯಶ್.

ರಾಕಿಂಗ್ ಸ್ಟಾರ್ ಯಶ್ ವಿರುದ್ಧ “ಅವನ್ಯಾವನೋ ಯಶ್ ಅಂತೆ ” ಎಂದು ಏಕವಚನದಲ್ಲೇ ಧಮ್ಕಿ ಹಾಕಿದ್ದ HDKಗೆ ಯಶ್ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ.. “ಜೆಡಿಎಸ್ ಕಾರ್ಯಕರ್ತರು ಏನು ಮಾಡುತ್ತಾರಂತೆ. ಜಾಸ್ತಿ ಮಾತನಾಡುತ್ತಿದ್ದೀನಿ ಎಂದರೆ ಏನರ್ಥ? ನಾವು ಸುಮಲತಾ ಪರ ಪ್ರಚಾರ ನಡೆಸಬಾರದಂತಾ? ಇದು ರೌಡಿ ರಾಜ್ಯವಲ್ಲ. ಪ್ರಜಾಪ್ರಭುತ್ವ. ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಮಾತನಾಡಬೇಕಾಗುತ್ತದೆ. ಆರೂವರೆ ಕೋಟಿ ಜನ ಒಪ್ಪಿಕೊಂಡ ಮುಖ್ಯಮಂತ್ರಿ ಹೀಗೆ ಹೇಳಬಹುದಾ? ” ಎಂದು ಯಶ್ ಹೇಳಿದ್ದಾರೆ.

“ನಾನು ಜೆಡಿಎಸ್​ ಪಕ್ಷವನ್ನು ಕಳ್ಳರ ಪಕ್ಷ ಎಂದು ಯಾವತ್ತೂ ಹೇಳಿಲ್ಲ. ನಾನು ಹಾಗೆ ಹೇಳಿದ್ದೇನೆಂದು ಯಾರಾದರೂ ತೋರಿಸಿಬಿಡಲಿ, ಅವರು ಹೇಳಿದಂತೆ ಕೇಳುತ್ತೇನೆ. ಅವರ ಪಕ್ಷದಲ್ಲಿ ಕೂಡ ನನಗೆ ತುಂಬ ಜನ ಸ್ನೇಹಿತರಿದ್ದಾರೆ. ಕಳೆದ ಬಾರಿ ಅವರ ಪರವಾಗಿಯೂ ಪ್ರಚಾರ ನಡೆಸಿದ್ದೆ. ಅದು ಕಳ್ಳರ ಪಕ್ಷವೆಂದಾದರೆ ನಾನ್ಯಾಕೆ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೆ.”

“ಅವರು ರಾಜ್ಯದ ಮುಖ್ಯಮಂತ್ರಿ. ತುಂಬ ಬಿಜಿಯಾಗಿರುತ್ತಾರೆ. ಈ ವಿಚಾರದಲ್ಲಿ ಯಾರೋ ಚಾಡಿ ಹೇಳಿರಬೇಕು. ತಪ್ಪು ಮಾಹಿತಿ ನೀಡಿರಬೇಕು.​ ನಾನು ಯಾವತ್ತೂ ಜೆಡಿಎಸ್ ಪಕ್ಷದ ವಿರುದ್ಧ ಮಾತನಾಡಿಲ್ಲ.. ಸುಮ್ಮನೆ ಆಡದ ಮಾತಿಗೆಲ್ಲ ನಾನು ಆರೋಪ ಹೊತ್ತುಕೊಳ್ಳುವುದಿಲ್ಲ. ಅವರ ಪಕ್ಷದಲ್ಲೇ ಹಲವು ಜನರು ಏನೇನೋ ಕೆಟ್ಟದಾಗಿ ಮಾತುಗಳನ್ನಾಡುತ್ತಿದ್ದಾರೆ. ನಮಗೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತೀರ ವಯಕ್ತಿಕವಾಗಿ​ ವಾಗ್ದಾಳಿ ನಡೆಸಿದಾಗ ನಾವು ಕೂಡ ತಿರುಗಿ ಮಾತಾಡಿದ್ದೇವೆ ಅಷ್ಟೇ” ಎಂದು ಯಶ್ ಹೇಳಿದ್ದಾರೆ

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದೇನು?
ಜಿಲ್ಲೆಯ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ರಾಕಿಂಗ್ ಸ್ಟಾರ್ ಯಶ್ ವಿರುದ್ದದ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅವನ್ಯಾವನೋ ಯಶ್ ಅಂತೇ, ನಾನು ಕಲಾವಿದರೂ ಅಂತಾ ಗೌರವ ಕೊಟ್ಟಿದ್ದಕ್ಕೆ, ನನ್ನ ಪಕ್ಷ ಕಳ್ಳರ ಪಕ್ಷ ಅಂತಾ ಹಳ್ಳಿಗಳ ಕಡೆ ಬಂದು ಹೇಳುತ್ತಾನೆ. ನನ್ನ ಕಾರ್ಯಕರ್ತರು ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ನಮ್ಮ ಕುಮಾರಸ್ವಾಮಿಗೆ ತೊಂದರೆ ಆಗಬಾರದು ಅಂತಾ ಇಲ್ಲದಿದ್ದರೆ ನಿಮ್ಮ ಗತಿ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top