fbpx
ಸಮಾಚಾರ

ವೈರಲ್ ಆಯ್ತು ಬಸ್ ಡ್ರೈವರ್ ಒಬ್ಬರು ಮತದಾನದ ರೀತಿ- ಮತದಾನದ ಬಗ್ಗೆ ಚಾಲಕನ ಕಾಳಜಿಗೆ ಪ್ರಶಂಸೆ.

ಮತದಾನದ ಬಗ್ಗೆ ಎಷ್ಟೇ ಜಾಗೃತಿ/ ಅರಿವು ಮೂಡಿಸಿದರೂ ಏನಾದರೂ ಒಂದು ನೆಪ ಹೇಳಿ ಮತ ಹಾಕದವರೂ ಇದ್ದಾರೆ. ಮತ ಹಾಕಿ ಅಂತಾ ರಜೆ ಕೊಟ್ರೆ ಜಾಲಿ ಟೂರಿಗೆ ಅಂತಾ ಹೋಗೋ ವಿದ್ಯಾವಂತರಿಗೇನು ಕಮ್ಮಿ ಇಲ್ಲ.ಇಂಥವರ ನಡುವೆ ಮಂಗಳೂರಿನ ಖಾಸಗಿ ಬಸ್ಸು ಚಾಲಕರೊಬ್ಬರು ಮಾದರಿಯಾಗಿದ್ದಾರೆ.

ಮಂಗಳೂರು- ಶಿವಮೊಗ್ಗ ಓಡಾಡುವ ಜಯರಾಜ್ ಹೆಸರಿನ ಖಾಸಗಿ ಬಸ್ಸು ಚಾಲಕನಾಗಿರುವ ವಿಜಯ್ ಶೆಟ್ಟಿ ಮೊನ್ನೆ ಬುಧವಾರ ಶಿವಮೊಗ್ಗಕ್ಕೆ ತೆರಳಿದ್ದರು. ಬಳಿಕ ನಿನ್ನೆ ಬೆಳಗ್ಗೆ ಶಿವಮೊಗ್ಗದಿಂದ ಹೊರಟ ಬಸ್ಸು ಬೆಳುವಾಯಿ ಬಳಿ ಬರುತ್ತಿದ್ದಂತೆ ಬಸ್​ ನಿಲ್ಲಿಸಿ ಓಡೋಡಿ ತನ್ನ ಮತಗಟ್ಟೆಗೆ ಹೋಗಿ ಮತಚಲಾಯಿಸಿದ್ದಾರೆ.

ಬಸ್ ನ ಕರ್ತವ್ಯದಲ್ಲಿರುವಾಗಲೇ ತಮ್ಮ ಮತಗಟ್ಟೆಯಲ್ಲಿ ಬಸ್ ನಿಲ್ಲಿಸಿ ಮತದಾನ ಮಾಡಲು ಓಡಿ ಹೋಗಿ ಮತದಾನ ಮಾಡಿ ಮತ್ತೆ ಓಡಿ ಬಂದು ಬಸ್ ಚಾಲನೆ ಮಾಡಿದ್ದಾರೆ. ಬೆಳುವಾಯಿ ಮತಗಟ್ಟೆಯ ಬಳಿ ಬಸ್​ ನಿಲ್ಲಿಸಿದ ವಿಜಯ್​ ಶೆಟ್ಟಿ ಬೇಗನೆ ಹೋಗಿ ತಮ್ಮ ಹಕ್ಕು ಚಲಾಯಿಸಿ, ಪ್ರಯಾಣಿಕರಿಗೂ ತೊಂದರೆಯಾಗದಂತೆ ಮತ್ತೆ ಕರ್ತವ್ಯಕ್ಕೆ ಹಾಜರಾಗೋ ಮೂಲಕ ಇತರರಿಗೆ ಮಾದರಿಯಾದ್ರು. ಬಸ್ ಡ್ರೈವರ್ ವಿಜಯ್ ಶೆಟ್ಟಿ ಅವರ ಬದ್ದತೆಗೆ ಸಾಮಾಜಿ ಜಾಲತಾಣಗಳಲ್ಲಿ ಅಭಿನಂದನೆಗಳು ಹರಿದು ಬಂದಿದೆ.

ವಿಡಿಯೋ ನೋಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top