fbpx
ಸಮಾಚಾರ

ಕಾಫಿ ವಿಥ್ ಕರಣ್ ವಿವಾದ – ಭಾರೀ ದಂಡ ತೆತ್ತ ಕೆಎಲ್ ರಾಹುಲ್, ಪಾಂಡ್ಯ

ಜನಪ್ರಿಯ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ ಎಲ್ ರಾಹುಲ್‌ಗೆ ಬಿಸಿಸಿಐ ಒಂಬುಡ್ಸ್‌ಮನ್ ಡಿ ಕೆ ಜೈನ್ ಶನಿವಾರ ತಲಾ 20 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಬಿಸಿಸಿಐ ಓಂಬುಡ್ಸ್ಮನ್ ಆದೇಶ ಹೊರಡಿಸಿದ್ದು, ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ 10 ಅರೆಸೇನಾ ಪಡೆ ಪೇದೆಗಳ ಕುಟುಂಬಕ್ಕೆ ಒಂದೊಂದು 1 ಲಕ್ಷ ನೀಡುವಂತೆ ಇಬ್ಬರಿಗೂ ಸೂಚನೆ ನೀಡಿದೆ. ಇನ್ನು 10 ಲಕ್ಷ ರೂಪಾಯಿಯನ್ನು ಅಂಧರ ಕ್ರಿಕೆಟ್ ಉತ್ತೇಜನಕ್ಕಾಗಿ ಪ್ರಾರಂಭಿಸಲಾಗಿರುವ ನಿಧಿಗೆ ನೀಡಬೇಕೆಂದು ಬಿಸಿಸಿಐ ಇಬ್ಬರೂ ಆಟಗಾರರಿಗೆ ಸೂಚಿಸಿದೆ.

ತೀರ್ಪು ನೀಡಿದ 4 ವಾರದ ಒಳಗಾಗಿ ಇಬ್ಬರೂ ಆಟಗಾರರು ದಂಡದ ಮೊತ್ತವನ್ನು ಪಾವತಿಸಬೇಕು. ಹಾಗೆ ಅವರು ಪಾವತಿಸದಿದ್ದಲ್ಲಿ ಅವರ ಪಂದ್ಯದ ಸಂಭಾವನೆ ಹಣದಿಂದ ದಂಡದಮೊತ್ತವನ್ನು ಕಳೆದು ಬಿಸಿಸಿಐ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದ ಡಿ.ಕೆ. ಜೈನ್ ತೀರ್ಪು ನೀಡಿದ್ದಾರೆ.

ಏನಿದು ವಿವಾದ?
ಕರಣ್ ಜೋಹರ್ ನಡೆಸಿಕೊಟ್ಟ ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ಪಾಂಡ್ಯ ಹಾಗೂ ರಾಹುಲ್ ಮಹಿಳೆಯರ ಬಗ್ಗೆ ಸ್ತ್ರೀದ್ವೇಷಿ, ಕಾಮಪ್ರಚೋದಕ ಹೇಳಿಕೆಗಳನ್ನು ನೀಡಿದ್ದರು. ಈ ವೇಳೆ ರಾಹುಲ್‌ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಹಾರ್ದಿಕ್‌ ಮುಕ್ತವಾಗಿ ಮಾತುಗಳನ್ನಾಡಿದ್ದರು. ಇದು ವ್ಯಾಪಕ ಟೀಕೆಗೆಗಳಿಗೆ ಗುರಿಯಾಗಿತ್ತು. ಬಳಿಕ ಪಶ್ಚಾತಾಪ ವ್ಯಕ್ತಪಡಿಸಿದ ಪಾಂಡ್ಯ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದರು. ಆದರೂ ಬಿಸಿಸಿಐ ಆಡಳಿತ ಸಮಿತಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top