fbpx
ಸಮಾಚಾರ

#JusticeForMadhu- ಮಧು ಅನುಮಾಸ್ಪದ ಸಾವಿನ ಕುರಿತು ಮನಕಲಕುವ ಪತ್ರ ಬರೆದ ಯೋಗರಾಜ್ ಭಟ್.

ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಗಣ್ಯರು , ನಟ ನಟಿಯರು ಸಹ ಇದನ್ನು ಖಂಡಿಸಿದ್ದಾರೆ. ಇದೀಗ ಮಧು ಸಾವು ಖಂಡಿಸಿ ನಿರ್ದೇಶಕ ಯೋಗರಾಜ್ ಭಟ್ ಅವರು ಮನಮಿಡಿಯುವ ಪತ್ರ ಬರೆದಿದ್ದಾರೆ.

ಭಟ್ಟರ ಪತ್ರ ಹೀಗಿದೆ-
‘ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ. ಎಲ್ಲ ಕಡೆಗೆ ಮರುಕ ಮಡುಗಟ್ಟುತ್ತಿದೆ ‘ಮಧು’ ಎಂಬ ಅಮಾಯಕಿ ಕೊಲೆಗೆ. ಇದೇ ರೀತಿಯ ಕೃತ್ಯ ದೆಹಲಿಯಲ್ಲಿ ನಡೆದಾಗ ಇಡೀ ಭಾರತ ಕೂಗಿತು. ಆದರೆ ನಮ್ಮ ರಾಜಧಾನಿ ಬೆಂಗಳೂರು ಮಾತ್ರ ಮೊನ್ನೆಯಿಂದಲೂ ಪ್ರತಕ್ರಿಯೆ ನೀಡಲು, ಮಾತನಾಡಲು ಮನಸ್ಸು ಮಾಡುತ್ತಿಲ್ಲ”

ಹೋಗಲಿ ಏನೋ ವೋಟು ಹಾಕುವ ಕೆಲಸ ಇತ್ತು ಅನ್ನುವುದಾದರೆ ಅದೂ ಇಲ್ಲ. 45 % ಜನ ಮಾತ್ರ ಮತ ಹಾಕಿದ್ದಾರೆ. ಬಾಕಿ ಜನರು ದಿವ್ಯ ನಿದ್ದೆಯಲ್ಲಿದ್ದಾರಾ? ಯಾರು ಎಬ್ಬಿಸುವುದು ಇವರನ್ನು? ಮಧು ಆತ್ಮಕ್ಕೆ ನೆಮ್ಮದಿಕೋರುವುದು ಪ್ರತಿಯೊಬ್ಬ ಕರ್ತವ್ಯ ಅಲ್ಲವೇ? ಯಾರ ಮನೆಯ ಮಗುವಾದರೇನು ಸಾವೆಂಬ ಸಂಕಟ ಎಲ್ಲರಿಗು ತೀವ್ರವಾಗಿ ಕಾಡಬೇಕಲ್ಲವೇ?’

ದಯಮಾಡಿ ಈ ಮಾನಭಂಗ ಕೊಲೆಯಂತಹ ವಿಕೃತಿಗಳನ್ನು ತಡೆಯಲು ತಡವಾದರೂ ಪರವಾಗಿಲ್ಲ ಕೊನೆ ಪಕ್ಷ ಪ್ರತಿಕ್ರಿಯಿಸಿ.. ಒಂದೇ ದನಿಯಲ್ಲಿ ಒಂಚೂರು ಆವೇಶದಲ್ಲಿ ಭವಿಷ್ಯದ ಹೂವುಗಳನ್ನು ಸುಡಲು ಬರುವ ಬೆಂಕಿಯನ್ನು ಒಂದೇ ಒಂದು ‘ಕಿಡಿ’ ಕೂಡ ಉಳಿಯದಂತೆ ನಂದಿಸಲು ಮುಂದಾಗಿ…ಮಧು…ಕಂದಮ್ಮ…ನಿನಗೆ ನ್ಯಾಯ ನೀ ಇಲ್ಲದಿದ್ದರೂ..ಸಿಗಲಿ….ಹೋಗಿ ಬಾ ತಾಯಿ…”

ಮಧು ಸಾವಿಗೆ ನ್ಯಾಯ ಕೇಳುತ್ತಿದ್ದಾರೆ ಎಲ್ಲರೂ:
ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಸಜೆಯಾಗಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು, ಅಭಿಯಾನಗಳು ನಡೆಯುತ್ತಿದೆ. ಸಾಮಾಜ್ಜಿಕ ತಾಣದಲ್ಲೈ ಸಹ ಮಧು ಸಾವಿಗೆ ನ್ಯಾಯಬೇಕೆಂಬ ಕೂಗು ಜೋರಾಗಿ ಕೇಳಿದೆ. ಈಗ ಈ ಪ್ರಕರಣದಲ್ಲಿ ನ್ಯಾಯ ಸಿಗಲಿ ಎಂದು ರಾಜ್ಯದ ಯುವಜನತೆಗಳೊಂದಿಗೆ ಸ್ಯಾಂಡಲ್ ವುಡ್ ನಟ, ನಟಿಯರೂ ಕೈಜೋಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top