fbpx
ಸಮಾಚಾರ

ಕೆಜಿಎಫ್‌-2 ಸಿನಿಮಾದಲ್ಲಿ ನೀವೂ ನಟಿಸಬಹುದು- ಆಸಕ್ತಿ ಇದ್ದವರು ಹೀಗೆ ಮಾಡಿ.

ಕನ್ನಡದ ಸಿನಿ ಅಂಗಳದಲ್ಲಿ ಇತಿಹಾಸ ಬರೆದ ಸಿನಿಮಾ ಕೆಜಿಎಫ್-ಚಾಪ್ಟರ್ 1. ಮೊದಲ ಆವೃತ್ತಿಯ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಚಿತ್ರತಂಡ ಕೆಜಿಎಫ್-2 ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಈ ನಡುವೆ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್, ಹೊಸ ಕಲಾವಿದರಿಗೆ ಕೆಜಿಎಫ್-2ನಲ್ಲಿ ನಟಿಸುವ ಸುವರ್ಣಾವಕಾಶ ನೀಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಚಾಪ್ಟರ್-2 ತಯಾರಾಗುತ್ತಿದ್ದು, ಚಿತ್ರತಂಡ ಹೊಸ ಪ್ರತಿಭೆಗಳಿಗಾಗಿ ಹುಡುಕಾಟ ಪ್ರಾರಂಭಿಸಿದೆ. ಹೊಸ ಪ್ರತಿಭೆಗಳನ್ನು ಗುರುತಿಸಲು ಕೆಜಿಎಫ್-2 ಚಿತ್ರತಂಡ ಆಡಿಷನ್ ಪ್ರಾರಂಭಿಸಿದೆ.

8 ರಿಂದ 16 ವರ್ಷದ ಹುಡುಗರು ಹಾಗೂ 25ಕ್ಕೂ ಹೆಚ್ಚು ವಯಸ್ಸಾದ ಪುರುಷರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 26ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ತನಕ ಆಡಿಷನ್ಸ್ ನಡೆಯಲಿದೆ. ಡೈಲಾಗ್ ಹೇಳಲು ಕೇವಲ ಒಂದು ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಆಯ್ಕೆಯಾದವರಿಗೆ ಕೆಜಿಎಫ್ 2 ಚಿತ್ರದಲ್ಲಿ ನಟಿಸುವ ಅವಕಾಶ ಸಿಗಲಿದೆ.

ಸದ್ಯ ಈ ಚಿತ್ರದ ಚಾಪ್ಟರ್ 2 ಚಿತ್ರೀಕರಣದ ತಯಾರಿಯಲ್ಲಿದೆ ಚಿತ್ರತಂಡ. ಹೀಗಿರುವಾಗಲೇ ಹೊಂಬಾಳೆ ಫಿಲ್ಮ್ಸ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಧಿಕೃತ ಪಯಟದಲ್ಲಿ ಆಡಿಷನ್​ ಕುರಿತಾದ ಪೋಸ್ಟ್​ ಮಾಡಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top