fbpx
ಸಮಾಚಾರ

CSK ವಿರುದ್ಧ RCB ಗೆಲ್ಲಲು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕನೇ ಕಾರಣ ಅಂತಿದ್ದಾರೆ ನೆಟ್ಟಿಗರು.

ಮೊನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವಿನ ಭಾನುವಾರದ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ಎರಡು ರನ್ ಬೇಕಾಗಿತ್ತು. ಆದರೆ ಸ್ಟ್ರೈಕರ್‌ನಲ್ಲಿದ್ದ ಧೋನಿಗೆ ಪಂದ್ಯ ಗೆಲ್ಲಿಸಲಾಗಲಿಲ್ಲ. ಚೆಂಡು ಮಿಸ್ ಆಯಿತು. ವಿಕೆಟ್ ಹಿಂದುಗಡೆ ನಿಂತಿದ್ದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ನೇರ ಥ್ರೋ ಮೂಲಕ ರನೌಟ್ ಮಾಡುವ ಮೂಲಕ ಆರ್‌ಸಿಬಿಗೆ ರೋಚಕ ಗೆಲುವು ಒದಗಿಸಿಕೊಟ್ಟರು. ಈ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರು.

ಆದರೆ ಈ ಪಂದ್ಯವನ್ನು ಆರ್ಸಿಬಿ ಗೆಲ್ಲಲು ಕಿಂಗ್ಸ್ ಇಲೆವೆನ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಅವರೇ ಕಾರಣ ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ. ಪಂದ್ಯದ ಅಂತಿಮ ಓವರಿನಲ್ಲಿ ನಡೆದ ರನೌಟ್ ನಿಂದಾಗಿ ಈ ಪ್ರಶ್ನೆ ಎದ್ದಿದ್ದು, ಆರ್ ಅಶ್ವಿನ್ ಟೂರ್ನಿಯಲ್ಲಿ ‘ಮಂಕಡ್’ ರನೌಟ್ ಮಾಡಿದ್ದೆ ಕಾರಣ ಎಂಬ ವಿವರಣೆಯನ್ನು ಮುಂದಿಟ್ಟಿದ್ದಾರೆ.

ಟೂರ್ನಿಯಲ್ಲಿ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರ ಪರಿಣಾಮ ಬೌಲರ್ ಚೆಂಡು ಎಸೆಯುವ ಮುನ್ನ ಶಾರ್ದೂಲ್ ಠಾಕೂರ್ ಕ್ರಿಸ್ ಬಿಡಲು ಹಿಂದೇಟು ಹಾಕಿದ್ದರಿಂದಲೇ ರನೌಟ್ ಆಗಿದೆ. ಹೀಗಾಗಿ ಆರ್ಸಿಬಿ ಜಯ ಸಾಧಿಸಲು ಅಷ್ವಿನ್ ಅವರು ಕೂಡ ಪರೋಕ್ಷವಾಗಿ ಕಾರಣಕರ್ತರು ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top