fbpx
ಸಮಾಚಾರ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಗ್ ರಿಲೀಫ್.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎದುರಾಗಿದ್ದ ‘ಪೌರತ್ವ’ ಅಡಚಣೆ ನಿವಾರಣೆಯಾಗಿದ್ದು ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ರಾಹುಲ್‌ ಗಾಂಧಿ ಅವರ ನಾಮಪತ್ರವು ಸಿಂಧುವಾಗಿದ್ದು, ಅದನ್ನು ಅಂಗೀಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ರಾಹುಲ್ ನಾಮಪತ್ರ ಸಲ್ಲಿಕೆ ಬಳಿಕ ಪಕ್ಷೇತರ ಅಭ್ಯರ್ಥಿ ದ್ರುವಲಾಲ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ರಾಹುಲ್ ಗಾಂಧಿ ಶಿಕ್ಷಣ, ದಾಖಲೆಗಳು, ರಾಷ್ಟ್ರೀಯತೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ, ಶನಿವಾರ ನಡೆಯಬೇಕಿದ್ದ ರಾಹುಲ್‌ರ ನಾಮಪತ್ರ ಪರಿಶೀಲನೆಯನ್ನು ರಿಟರ್ನಿಂಗ್‌ ಆಫೀಸರ್‌ ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಪೌರತ್ವ ವಿಚಾರಕ್ಕೆ ಸಂಬಮಧಿಸಿದಂತೆ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ ಹಾಗೂ ಅವರು ಯಾವುದೇ ಅಡಚಣೆ ಇಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.

ರಾಹುಲ್ ಗಾಂಧಿ ಭಾರತದಲ್ಲಿ ಜನಿಸಿದ್ದು, ಈ ದೇಶದ ಪಾಸ್ ಪೋರ್ಟ್ ಹೊಂದಿದ್ದಾರೆ. ಅವರು ಇತರ ಯಾವುದೇ ರಾಷ್ಟ್ರದ ಪೌರತ್ವ ಹೊಂದಿಲ್ಲ, ಅವರ ಪಾಸ್ ಪೋರ್ಟ್, ವೋಟರ್ ಐಡಿ, ಆದಾಯ ತೆರಿಗೆ ಎಲ್ಲವೂ ಭಾರತಕ್ಕೆ ಸೇರಿವೆ ಎಂದು ರಾಹುಲ್ ಪರ ವಕೀಲ ಕೆ. ಸಿ. ಕೌಶಿಕ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top