fbpx
ಸಮಾಚಾರ

ಶ್ರೀಲಂಕಾ ಬಾಂಬ್ ದಾಳಿ: ಕೂದಲೆಳೆಯಲ್ಲಿ ಪಾರಾದ ಬಹುಭಾಷಾ ನಟಿ ರಾಧಿಕಾ ಶರತ್​ಕುಮಾರ್ ಹೇಳಿದ್ದು ಹೀಗೆ.

ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿನಿಮಾ ತಾರೆ ರಾಧಿಕಾ ಶರತ್ ಕುಮಾರ್ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಕೆಲಸದ ನಿಮಿತ್ತ ಶ್ರೀಲಂಕಾಗೆ ಹೋಗಿದ್ದ ರಾಧಿಕಾ ಶರತ್ ಕುಮಾರ್ ಬೆಳಗ್ಗೆ ಸಿನ್ನಾಮನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅವರು ಕೆಲಸ ಮುಗಿಸಿಕೊಂಡು ಹೋಟೆಲ್‌ನಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಸ್ಫೋಟ ಸಂಭವಿಸಿದೆ.

ಸ್ಟೋಟ ಸಂಭವಿಸಿದ್ದ ಹೋಟೆಲ್ ಗಳಲ್ಲಿ ಒಂದಾದ ಸಿನ್ನಾಮಾನ್ ಗ್ರಾಂಡ್ ಹೋಟೆಲ್ ನಲ್ಲಿದ್ದ ಕಾಲಿವುಡ್ ನಟಿ ರಾಧಿಕಾ ಶರತ್ ಕುಮಾರ್ , ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬಾಂಬ್ ಸ್ಟೋಟ ಸಂವಿಸುವ ಕೆಲವೇ ನಿಮಿಷದ ಮುಂಚೆ ಆಕೆ ಆ ಹೋಟೆಲ್ ನಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿದ್ದಾರೆ.

“ಕೊಲಂಬೊದಲ್ಲಿನ ಚಿನ್ನಾಮೊನ್ ಗ್ರಾಂಡ್ ಹೋಟೆಲ್ ನಿಂದ ನಿರ್ಗಮಿಸಿದ ಕೆಲ ಹೊತ್ತಿನಲ್ಲಿ ಬಾಂಬ್ ಸ್ಟೋಟ ಸುದ್ದಿ ಕೇಳಿ ಶಾಂಕ್ ಆಗಿದೆ. ನಾನು ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ಆಘಾತಕಾರಿಯಾದ ಸಂಗತಿ. ದೇವರ ದಯೆಯಿಂದ ನಾವೆಲ್ಲಾ ಅಪಾಯದಿಂದ ಪಾರಾಗಿರುವುದಾಗಿ” ರಾಧಿಕಾ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ

 

 

ಇನ್ನು ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಭಾನುವಾರವೇ ಸರಣಿ ಬಾಂಬ್​ ಸ್ಪೋಟ ಸಂಭವಿಸಿದ ಘಟನೆ ನಡೆದಿದೆ. ಈ ಬಾಂಬ್ ಸ್ಫೋಟದಲ್ಲಿ ಮೃತಪಟ್ವರ ಸಂಖ್ಯೆ 290ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಕನಿಷ್ಠ ಆರು ಮಂದಿ ಭಾರತೀಯರು ಸೇರಿದ್ದಾರೆ. ಒಟ್ಟು 27 ವಿದೇಶಿಯರು ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 500 ಮಂದಿಗೆ ಗಾಯಗಳಾಗಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top