fbpx
ಸಮಾಚಾರ

ಶ್ರೀಲಂಕಾ ಬಾಂಬ್ ಸ್ಫೋಟ- ಕೂದಲೆಳೆಯ ಅಂತರದಲ್ಲಿ ಬಚಾವ್ ಆದ ‘ದಿ ವಿಲನ್’ ನಿರ್ಮಾಪಕ

ಶ್ರೀಲಂಕಾ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಬಾಂಬ್​​ ಸ್ಫೋಟದಲ್ಲಿ ದಿ ವಿಲನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಸಿಆರ್ ಮನೋಹರ್ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ ಎಂಬುದು ತಡವಾಗಿ ಬೆಳಕಿದೆ ಬಂದಿದೆ..

ಶ್ರೀಲಂಕಾಗೆ ತೆರಳಿದ್ದ ವಿಧಾನಪರಿಷತ್ ಸದಸ್ಯ ಹಾಗೂ ಸಿನಿಮಾ ನಿರ್ಮಾಪಕ ಸಿಆರ್ ಮನೋಹರ್ ಅವರು ಅಲ್ಲಿ ‘ತಾಜ್ ಹೋಟೆಲ್’ನಲ್ಲಿ ಉಳಿದುಕೊಂಡಿದ್ದರು. ಅದೇ ಹೋಟೆಲ್ ಪಕ್ಕದಲ್ಲಿ ಬಾಂಬ್ ಬ್ಲಾಸ್ ಆಗಿದೆ. ಇದರಿಂದ ಸಹಜವಾಗಿ ಆತಂಕಗೊಂಡ ಸಿಆರ್ ಮನೋಹರ್ ಅವರು ನಿನ್ನೆ ಸಂಜೆ ಭಾರತಕ್ಕೆ ವಾಪಸ್ ಆಗಿದ್ದಾರೆ.

ಇನ್ನು ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಭಾನುವಾರವೇ ಸರಣಿ ಬಾಂಬ್​ ಸ್ಪೋಟ ಸಂಭವಿಸಿದ ಘಟನೆ ನಡೆದಿದೆ. ಈ ಬಾಂಬ್ ಸ್ಫೋಟದಲ್ಲಿ ಮೃತಪಟ್ವರ ಸಂಖ್ಯೆ 290ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಕನಿಷ್ಠ ಆರು ಮಂದಿ ಭಾರತೀಯರು ಸೇರಿದ್ದಾರೆ. ಒಟ್ಟು 27 ವಿದೇಶಿಯರು ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 500 ಮಂದಿಗೆ ಗಾಯಗಳಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top