fbpx
ಸಮಾಚಾರ

ದೇಶದ ಐಕ್ಯತೆ ಸಾರಲು ಕ್ಯಾಪ್ಟನ್ ಮಣಿವಣ್ಣನ್ ಅವರಿಂದ ವಿನೂತನ ಸ್ಪರ್ಧೆ- ನೀವೂ ಭಾಗವಹಿಸಬಹುದು.

ಚುನಾವಣೆಯ ಸಮಯದಲ್ಲಿ ಯುವಕರು ಸೋಷಿಯಲ್ ಮೀಡಿಯಾದಲ್ಲಿ ತಾವು ಬೆಂಬಲ ನೀಡುವ ರಾಜಕೀಯ ಪಕ್ಷದ ಪರವಾಗಿ ವಾದ ಮಾಡುತ್ತಾ ವಾರ್ ಮಾಡುತ್ತಿರುತ್ತಾರೆ.. ಆದರೆ ಇಂಥಾ ಯುವಕರ ನಡುವೆ ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ದೇಶದ ಯುವಕರಿಗೆ ಹೊಸ ಚಾಲೆಂಜ್ ನೀಡಿದ್ದು ಇದರಲ್ಲಿ ಗೆದ್ದವರಿಗೆ ಅಪರೂಪದ ಪುಸ್ತಕಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

 

 

“ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿರುವ ಮಣಿವಣ್ಣನ್ ಎರಡು ಅಥವಾ ಅದಕ್ಕಿಂತ ಹೆಚ್ಚು ಪಕ್ಷದ ಕಾರ್ಯಕರ್ತರು, ಮುಖಂಡರು ಒಟ್ಟಿಗೆ ಅನ್ಯೋನ್ಯವಾಗಿ ಇರುವ ಫೋಟೋವನ್ನು ಕಳುಹಿಸಿ ಕೊಡಿ. ಇದರಲ್ಲಿ ಅತ್ಯತ್ತಮ ಮೂವತ್ತು ಫೋಟೋಗಳನ್ನು ಆಯ್ಕೆ ಮಾಡಿ ಪುಸ್ತಕಗಳನ್ನು ಬಹುಮಾನಗಳನ್ನಾಗಿ ನೀಡುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ..

ಅಷ್ಟೇ ಅಲ್ಲದೆ ಕಾಂಗ್ರೆಸ್, ಬಿಜೆಪಿ ಮತ್ತು ಎಡ ಪಕ್ಷದ ಕಾರ್ಯಕರ್ತರು ಒಂದೇ ಕಾರನಲ್ಲಿ ತಂತಮ್ಮ ಪಕ್ಷದ ಭಾವುಟಗಳನ್ನು ಹಿಡಿದು ಸಂಚರಿಸುತ್ತಿರುವ ಫೋಟೋವನ್ನು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು ಆ ಪೋಸ್ಟ್ ಅನ್ನು ಮಣಿವಣ್ಣನ್ ರೀಟ್ವೀಟ್ ಮಾಡಿ ಈ ರೀತಿಯ ಫೋಟೋಗಳನ್ನು ಕಳುಹಿಸಿ ಎಂದು ಯುವಕರಿಗೆ ಕರೆ ನೀಡಿದ್ದಾರೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top