fbpx
ಸಮಾಚಾರ

ಬಿಜೆಪಿಯಿಂದ ಸ್ಪರ್ಧಿಸಿರುವ ಕ್ರಿಕೆಟಿಗ ಗೌತಮ್ ಗಂಭೀರ್ ಹೊಂದಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​ ಅವರು ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಗಂಭೀರ್​ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಅವರು ತಮ್ಮ ಬಳಿ 147 ಕೋಟಿ ರೂ. ಬೆಲೆಬಾಳುವ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಅವರು ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ 349 ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪೂರ್ವ ದಿಲ್ಲಿಯಿಂದ ಕಣಕ್ಕಿಳಿದಿರುವ ಗಂಭೀರ್‌ 2017-18ರಲ್ಲಿ ಸಲ್ಲಿಕೆ ಮಾಡಿರುವ ಐಟಿ ರಿಟರ್ನ್ಸ್‌ನಲ್ಲಿ ಆದಾಯ ಸುಮಾರು 12.40 ಕೋಟಿ ರೂ. ತೋರಿಸಿದ್ದಾರೆ. ಅವರ ಪತ್ನಿ ನಟಾಶಾ ಗಂಭೀರ್‌ ಅವರು ಐಟಿ ರಿಟರ್ನ್ಸ್‌ ಸಲ್ಲಿಕೆಯಲ್ಲಿ 6.15 ಲಕ್ಷ ರೂ. ಆದಾಯವಿರುವುದಾಗಿ ತೋರಿಸಿದ್ದಾರೆ. ಗಂಭೀರ್ ಅವರಿಗೆ ಕ್ರಿಕೆಟ್ ವೀಕ್ಷಕ ವಿವರಣೆ ನೀಡುವುದರಿಂದ, ಹೂಡಿಕೆ ಮೇಲಿನ ಬಡ್ಡಿ ಮತ್ತು ವ್ಯವಹಾರದಿಂದ ಆದಾಯ ಬರುತ್ತಿದೆ.

ಇನ್ನು ಗಂಭೀರ್ ಅವರಿಗೆ 34.15 ಕೋಟಿ ಸಾಲವಿದೆ. ಜೊತೆಗೆ 1.32 ಕೋಟಿ ಸರ್ಕಾರಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಗಂಭೀರ್ ಅವರ ಬಳಿ 5.21 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಗಂಭಿರ್ ಪತ್ನಿ ಬಳಿ 23.98 ಲಕ್ಷ ಮೌಲ್ಯದ ಆಭರಣಗಳಿವೆ.

2011ರ ಏಕದಿನ ವಿಶ್ವಕಪ್‌ ಕ್ರಿಕೆಟ್ ಹೀರೋ ಡಿಸೆಂಬರ್‌ 2018ರಲ್ಲಿ ನಿವೃತ್ತರಾಗಿದ್ದರು. ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಕೆಲ ತಿಂಗಳಲ್ಲೇ ಬಿಜೆಪಿಗೆ ಗೌತಮ್ ಗಂಭೀರ್ ಸೇರ್ಪಡೆಯಾಗಿದ್ದರು. ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅರುಣ್‌ ಜೇಟ್ಲಿ ಹಾಗೂ ರವಿಶಂಕರ್ ಪ್ರಸಾದ್ ಗೌತಮ್‌ ಗಂಭೀರ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top