fbpx
ಸಮಾಚಾರ

ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ 1 ದಿನಕ್ಕೆ ಆಗುತ್ತಿರುವುದು ಎಷ್ಟು ಕೋಟಿ ನಷ್ಟ ಗೊತ್ತಾ?

ಚೀನಾದ ಬೈಟ್ ಡ್ಯಾನ್ಸ್ ಟೆಕ್ನಾಲಜಿ ಕಂಪನಿಯ ಖ್ಯಾತ ವಿಡಿಯೋ ಆಪ್‍ ಟಿಕ್‍ ಟಾಕ್ ನ್ನು ಭಾರತ ಸರ್ಕಾರ ನಿಷೇಧಿಸಿರುವುದರಿಂದ ಕಂಪನಿಗೆ ದಿನಕ್ಕೆ ರೂ. 4.5 ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಟಿಕ್‍ ಟಾಕ್ ಆಪ್ ನಿಷೇಧದ ಬಳಿಕ ಕಂಪನಿಗೆ 250 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭಯದ ಸ್ಥಿತಿಯಲ್ಲಿದ್ದಾರೆ.

ಟಿಕ್ ಟಾಕ್ ನಿಷೇಧ ಸಂಬಂಧ ಸುಪ್ರಿಂ ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ ಮಂಡಿಸಿರುವ ಬೈಟ್ ಡ್ಯಾನ್ಸ್ ಕಂಪನಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಆ್ಯಪ್ ನಿಷೇಧದ ಬಳಿಕ ಕೇವಲ ಬೈಟ್ ಡ್ಯಾನ್ಸ್ ಗೆ ಮಾತ್ರವಲ್ಲ, ಈ ಆ್ಯಪ್ ಬಳಕೆ ಮಾಡುತ್ತಿದ್ದ ಸುಮಾರು 20 ಲಕ್ಷ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಅಲ್ಲದೆ ಕಂಪನಿಯ 250ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಟಿಕ್ ಟಾಕ್ ಅಪ್ಲಿಕೇಶನ್‍ ನಲ್ಲಿ ಆಕ್ಷೇಪಾರ್ಹ ವಿಡಿಯೋಗಳು ಪ್ರಸಾರವಾಗುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಇದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಟಿಕ್ ಟಾಕ್ ನಿಷೇಧಿಸುವಂತೆ ಏಪ್ರಿಲ್ 3 ರಂದು ಆದೇಶ ಹೊರಡಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top