fbpx
ಸಮಾಚಾರ

ತಂದೆಯೊಂದಿಗಿನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ವೀರೇಂದ್ರ ಹೆಗ್ಗಡೆಯವರ ಪುತ್ರಿ ಶ್ರದ್ಧಾ

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಮೊನ್ನೆಯಷ್ಟೇ ಶುರುವಾಗಿದ್ದು ಸೀಸನ್ ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಪುಟಗಳನ್ನ ಪರಿಚಯಿಸಿದ ಹೆಗ್ಗಡೆಯವರ ಪುತ್ರಿ ಶ್ರದ್ದಾ ತಮ್ಮ ತಂದೆಯೊಂದಿಗಿನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು.

“ಅಪ್ಪ ಎಂದರೆ ನನಗೆ ಅವರು ಹೇಳುತ್ತಿದ್ದ ಕಥೆಗಳು ನೆನಪಾಗುತ್ತದೆ. ಸುಧಾ, ತರಂಗದ ಕಥೆಗಳನ್ನು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಪುರಾಣದ ಕತೆಗಳಿಗಿಂತಲೂ ಅವರೇ ಕಲ್ಪಿಸಿಕೊಂಡು ಹೇಳುವ ಕಥೆಗಳು ನನಗೆ ಇನ್ನೂ ಖುಷಿಯಾಗುತ್ತಿತ್ತು. ಯಾಕಂದ್ರೆ ಅಂಥಾ ಕತೆಗಳಲ್ಲಿ ನಾನೇ ಹೀರೋಯಿನ್!” ಎಂದು ಶ್ರದ್ಧಾ ಹೇಳಿದರು.

“ಕೇವಲ ಪುರಾಣದ ಕತೆಗಳನ್ನೇ ಹೇಳಿದರೆ ಬೇಜಾರು ಆಗುತ್ತದೆ ಎಂದು ದೇವಲೋಕದಿಂದ ನಾರದ ಬರ್ತಾ ಇದ್ದ. ಕೆಳಗೆ ಒಂದು ಸುಂದರಿ ಪುಟ್ಟ ಮಗು ಆಟವಾಡುತ್ತಿತ್ತು, ಆ ಪುಟ್ಟ ಮಗು ನಾನೇ ಆಗಿರುತ್ತಿದ್ದೆ. ನಾರದ ಬಂದು ಎತ್ತಿಕೊಂಡು ಹೋಗ್ತಾ ಇದ್ದ. ನಾವು ಮೋಡಗಳ ಮಧ್ಯೆ ಹೋಗುವಾಗ ಏನೇನೋ ಬದಲಾವಣೆಗಳಾಗುತ್ತಿದ್ದವು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವವರೆಗೂ ಅವರ ಕಾಲ ಮೇಲೆ ನಾನು ಕೂತು ಇಂಥಾ ಕಥೆಗಳನ್ನು ಕೇಳುತ್ತಿದ್ದೆ” ತಂದೆ ಹೇಳುತ್ತಿದ್ದ ಕಲ್ಪಿತ ಕಥೆಗಳನ್ನು ಶ್ರದ್ದಾ ಮೆಲುಕು ಹಾಕಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top