fbpx
ಸಮಾಚಾರ

ತಿರುಗೇಟು ಅಂದ್ರೆ ಇದೇನಾ..? ಮಂಕಡ್ ರನೌಟ್ ಅಣಕಿಸಿ ಅಶ್ವಿನ್ ಚಳಿ ಬಿಡಿಸಿದ ಕಿಂಗ್ ಕೊಹ್ಲಿ.

ಇಂಡಿಯನ್ ಪ್ರೀಮಿಯರ್ ಲೀಗ್‌ 2019ನೇ ಆವೃತ್ತಿಯಲ್ಲಿ ಮಂಕಡ್ ರನೌಟ್ ಮಾಡಿ ಕುಖ್ಯಾತಿಗೆ ಒಳಗಾಗಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಣಕಿಸುವ ಮೂಲಕ ಭರ್ಜರಿ ತಿರುಗೇಟು ನೀಡಿದ್ದಾರೆ.

ಆರ್‌ಸಿಬಿ ಹಾಗೂ ಪಂಜಾಬ್ ನಡುವಣ ಪಂದ್ಯದಲ್ಲಿ ಅನೇಕ ಬಾರಿ ಬಿಸಿ ಬಿಸಿ ವಾತಾವರಣ ನಿರ್ಮಾಣ ಮಾಡಿತ್ತು.ಪಂದ್ಯದ ಅಂತಿಮ ಓವರ್ ನಲ್ಲಿ 26 ರನ್ ಗಳು ಬೇಕಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ಅಶ್ವಿನ್ ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ಪಂಜಾಬ್ ತಂಡದ ಗೆಲುವಿನ ಆಸೆಗೆ ನೀರೆರೆದರು. ಆದರೆ ನಂತರದ ಎಸೆತದಲ್ಲೇ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಈ ವೇಳೆ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆ ಕೊಹ್ಲಿ ಕೂಡ ಅಶ್ವಿನ್ ಗೆ ‘ಏನಾಯಿತು ನಿನ್ನ ಅಟ್ಟಹಾಸ, ಈಗ ಮಂಕಡ್ ರನೌಟ್ ಮಾಡು ನೋಡೋಣ’ ಎನ್ನುವ ರೀತಿಯಲ್ಲಿ ಸನ್ಹೆ ಮಾಡುತ್ತಾ ಅಶ್ವಿನ್ ಗೆ ತಿರುಗೇಟು ನೀಡಿದರು.

ವಿಡಿಯೋ ನೋಡಿ


ಬಳಿಕ ಡಗೌಟ್‌ನತ್ತ ಮರಳಿದ ಅಶ್ವಿನ್ ಆಕ್ರೋಶದಿಂದಲೇ ಬ್ಯಾಟ್, ಗ್ಲೌಸ್ ಕಿತ್ತೆಸದರು. ಇದರೊಂದಿಗೆ ಕೊಹ್ಲಿ ಹಾಗೂ ಅಶ್ವಿನ್ ನಡುವೆ ಬಿಗುವಾದ ವಾತಾವರಣ ನಿರ್ಮಾಣವಾಯಿತು. ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top