fbpx
ಸಮಾಚಾರ

ಸುಳ್ಳು ಸುದ್ದಿ ಹರಡಿಸಿದ ಆರೋಪದ ಮೇಲೆ ಅರೆಸ್ಟ್ ಆಗಿರುವ ಮಹೇಶ್ ಹೆಗ್ಡೆ ಬೆಂಬಲಕ್ಕೆ ನಿಂತ ಬಿಜೆಪಿ ನಾಯಕರು.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಬರೆದಿದ್ದಾರೆ ಎಂದು ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಸೈಬರ್ ಘಟಕದ ಪೊಲೀಸರು Postcard.comನ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿದ್ದಾರೆ.

ಗೃಹ ಸಚಿವ ಎಂಬಿ ಪಾಟೀಲ್ ಲಿಂಗಾಯತ ಧರ್ಮದ ವಿಚಾರವಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದ್ದಾರೆಂದು ನಕಲಿ ಪತ್ರವನ್ನು ಮಹೇಶ್​ ಹೆಗ್ಡೆ ಬಿಜೆಪಿ ಬೆಂಬಲಿತ ಫೇಸ್ಬುಕ್ ಪೇಜುಗಳ ಮೂಲಕ ವೈರಲ್ ಮಾಡಿದ್ದರು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನು ಗಮನಿಸಿದ್ದ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ದೂರು ಆಧರಿಸಿ, ಸಿಐಡಿ ಸೈಬರ್ ವಿಂಗ್‌ ಪೊಲೀಸರು ಆರೋಪಿ ಮಹೇಶ್​ ಹೆಗ್ಡೆನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಬಿಜೆಪಿ ಖಂಡನೆ:
ಈ ಮಧ್ಯೆ, #ಐ ಸ್ಟಾಂಡ್ ವಿತ್ ಮಹೇಶ್ ಹೆಗ್ಡೆ ಹ್ಯಾಶ್ ಟಾಗ್ ನೊಂದಿಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಸಿಟಿ ರವಿ ಮೊದಲಾದ ಬಿಜೆಪಿ ನಾಯಕರು ಮಹೇಶ್ ಹೆಗ್ಡೆಯನ್ನು ಬೆಂಬಲಿಸುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸರ್ಕಾರ ಮಹೇಶ್ ಹೆಗ್ಡೆ ಅವರನ್ನು ಬಂಧಿಸಿದನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ. ಗಾಂಧಿ ಕುಟುಂಬದ ಸುಳ್ಳನ್ನು ಬಹಿರಂಗ ಪಡಿಸಿದ್ದಕ್ಕೆ ಮಹೇಶ್ ಹೆಗ್ಡೆಯನ್ನು ಬಂಧಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

 

 

ಬಿಜೆಪಿ ಕಾಯಕರ್ತರ ವಿರುದ್ಧ ದುರುದ್ದೇಶಪೂರ್ವಕವಾಗಿ ಕುಮಾರಸ್ವಾಮಿ ಸರ್ಕಾರ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿದೆ. ಯಾವುದೇ ಕಾರಣ ಇಲ್ಲದೇ ವಿಕ್ರಂ ಹೆಗ್ಡೆಯನ್ನು ಸರ್ಕಾರ ಬಂಧಿಸಿದೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top