fbpx
ಸಮಾಚಾರ

ಡಾ.ರಾಜ್ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿದ RCB.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಂದ್ಯವು ಕನ್ನಡಿಗರಿಗೆ ಹಲವಾರು ಕಾರಣಗಳಿಂದ ವಿಶೇಷ ಎನಿಸಿತ್ತು. ಏಕೆಂದರೆ ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್ ಹುಟ್ಟುಹಬ್ಬ.

ಡಾ.ರಾಜ್ ಕುಮಾರ್​ ಹುಟ್ಟುಹಬ್ಬವನ್ನು ಆರ್​ಸಿಬಿ ಮತ್ತಷ್ಟು ವಿಶೇಷವಾಗಿಸಿದ್ದು ಚಿನ್ನಸ್ವಾಮಿಯ ದೊಡ್ಡ ಪರದೆಯ ಮೂಲಕ ಅಣ್ಣಾವ್ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಯಿತು.

ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದ್ದು ತುಂಬಿದ್ದರು. ಈ ನಡುವೆ ಡಾ.ರಾಜ್ ಫೋಟೋವನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಅಣ್ಣಾವ್ರ ಫೋಟೋ ಕಾಣಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಈ ಮೂಲಕ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪ್ರಾಂಚೈಸಿ ರಾಜಣ್ಣನ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ವಿಶೇಷವಾಗಿ ಆಚರಿಸಿತು.

ಇನ್ನು ಪಂಜಾಬ್ ವಿರುದ್ಧ 17 ರನ್ ಗಳ ಗೆಲುವು ಸಾಧಿಸುವ ಮೂಲಕ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆಯನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರರು ನೀಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top