fbpx
ಸಮಾಚಾರ

ರಾಹುಲ್ ಗಾಂಧಿ ಮದುವೆ ಮತ್ತು ರಹಸ್ಯ ಸಂಸಾರದ ಬಗ್ಗೆ ವೈರಲ್ ಆಗಿರುವ ಈ ಸುದ್ದಿಯ ಸತ್ಯಾಸತ್ಯತೆ ಏನು?

ದೇಶದ ಮೋಸ್ಟ್‌ ಎಲಿಜೆಬಲ್‌ ಬ್ಯಾಚುಲರ್‌ಗಳ ಪೈಕಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಒಬ್ಬರು. ಅವರ ಮದುವೆ ವಿಚಾರ ರಾಜಕೀಯ ಪಡಸಾಲೆಯಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಈ ಹಿಂದೆ ರಾಯ್‌ಬರೇಲಿ ಶಾಸಕಿ ಅದಿತಿ ಸಿಂಗ್‌ ಅವರೊಂದಿಗೆ ರಾಹುಲ್‌ ಮದುವೆ ನಿಶ್ಚಿಯವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತಾದರೂ ಅದು ವದಂತಿಯಾಗಿಯೇ ಉಳಿಯಿತು.

ಈಗ ತಾಜಾ ಸುದ್ದಿ ಏನೆಂದರೆ ರಾಹುಲ್ ಗಾಂಧಿ ಮದುವೆ ಯಾಗಿದ್ದಾರೆ ಎನ್ನುವ ಸುಳ್ಳು ಸುದ್ದಿ ವಿಕಿ ಲೀಕ್ಸ್ ನಲ್ಲಿ ವೈರಲ್ ಆಗಿದೆ. ರಾಹುಲ್ ಜೊತೆಗಿನ ಮಹಿಳೆಯ ಫೋಟೋ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಆ ಮಹಿಳೆ ಕೊಲಂಬಿಯಾ ಮಹಿಳೆ ಮತ್ತು ರಾಹುಲ್ ಗೆ ಇಬ್ಬರು ಮಕ್ಕಳಿದ್ದಾರೆ. ರಾಹುಲ್ ರಹಸ್ಯವಾಗಿ ಸಂಸಾರ ನಡೆಸುತ್ತಿದ್ದಾರೆ” ಎಂದು ಸುಳ್ಳು ಸುದ್ದಿ ಹರಡಿಸಲಾಗಿದೆ.

“ರಾಹುಲ್ ಅವರಿಗೆ ಲಂಡನ್ನಲ್ಲಿ ವಾಸಿಸುವ ಇಬ್ಬರು ಮಕ್ಕಳಿದ್ದಾರೆ. ಅವರ ಪತ್ನಿ ಕೊಲಂಬಿಯಾದವರು. ಮೊದಲ ಮಗು 14 ವರ್ಷದ ಹುಡುಗನಾಗಿದ್ದು ನ್ಯಾಕ್ ಎಂದು ಹೆಸರು. ಇನ್ನೊಂದು 10 ವರ್ಷದ ಹುಡುಗಿಯಾಗಿದು ಆಕೆಯ ಹೆಸರು ‘ಮಿನಿಕ’ ಆಗಿದೆ. ರಾಹುಲ್ ಗಾಂಧಿಯವರು ಅವಿವಾಹಿತರನ್ನು ಕರೆದೊಯ್ಯುವ ಮೂಲಕ ದೇಶವನ್ನು ದಾರಿತಪ್ಪಿಸುತ್ತಿದ್ದಾರೆ.” ಎಂಬ ಸಂದೇಶ ವಾಟ್ಸಪ್ಪ್ ಗಳಲ್ಲಿ ಹರಿದಾಡುತ್ತಿದೆ.

 

 

ಇದರ ಸತ್ಯಾಸತ್ಯತೆ ಏನು:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋ ಸಂಪೂರ್ಣ ನಕಲಿಯಾಗಿದೆ. ಫೋಟೋದಲ್ಲಿರುವ ಮಹಿಳೆ ಸ್ಪ್ಯಾನಿಷ್ ನಟಿ ಮತ್ತು ರಾಜಕೀಯ ವಿಜ್ಞಾನಿ ನಥಾಲಿಯಾ ರಾಮೋಸ್ ಅವರಾಗಿದ್ದು ವೈರಲ್ ಆಗಿರುವ ನಕಲಿ ಪೋಸ್ಟ್ನಲ್ಲಿ ಹೇಳಿದಂತೆ ಆಕೆ ಕೊಲಂಬಿಯನ್ ಅಲ್ಲ.

ಅಂದಹಾಗೆ ರಾಹುಲ್ ಗಾಂಧಿ ಜೊತೆಗಿನ ಆ ಫೋಟೋವನ್ನು ಸ್ವತಃ ಆಕೆಯ 2017 ರಲ್ಲಿ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರ್ಯಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಅಂದಹಾಗೆ 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧೀ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಾವು ಅವಿವಾಹಿತರು ಎಂದು ಕೂಡ ಹೇಳಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top