fbpx
ಸಮಾಚಾರ

RCB ಫ್ಯಾನ್ಸ್ ಗೆ ಆಘಾತಕಾರಿ ಸುದ್ದಿ- ಭರ್ಜರಿ ಫಾರ್ಮ್ ನಲ್ಲಿರೋ 3 ಸ್ಟಾರ್ ಆಟಗಾರರು ಮುಂದಿನ ಪಂದ್ಯಗಳಿಗೆ ಅಲಭ್ಯ.

ಸತತ ಸೋಲಿನಿಂದ ಕಂಗೆಟ್ಟಿದ್ದ RCB ತಂಡವು ಸದ್ಯ ಸತತ ಮೂರು ಪಂದ್ಯಗಳ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟುತ್ತಿದೆ. ಆದರೆ ಈ ನಡುವೆ ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿರುವ RCB ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ..

ಲೀಗ್ ಹಂತದ ಮುಂದಿನ ಮೂರು ಪಂದ್ಯಗಳಿಗೆ ಮೊಯಿನ್ ಆಲಿ, ಮಾರ್ಕ್ಯಾಸ್ ಸ್ಟೋನಿಸ್, ಮತ್ತು ಡೇಲ್ ಸ್ಟೇಯ್ನ್ ಅಲಭ್ಯರಾಗಿದ್ದಾರೆ. ಹೌದು, ಮುಂಬರುವ ವಿಶ್ವಕಪ್ ನಿಮಿತ್ತ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡದ ಆಟಗಾರರು ತಮ್ಮ ತಮ್ಮ ದೇಶಕ್ಕೆ ವಾಪಸ್ಸಾಗುತ್ತಿದ್ದು. RCBಯ ಪ್ರಮುಖ ಆಟಗಾರರಾದ ಮೊಯಿನ್ ಆಲಿ, ಮಾರ್ಕಸ್ ಸ್ಟಾಯ್ನಿಸ್ ತಮ್ಮ ದೇಶಗಳಿಗೆ ವಾಪಸ್ಸು ಹೋಗುತ್ತಿದ್ದಾರೆ.

 

 

ಪಾಕಿಸ್ತಾನ ಹಾಗೂ ಐರ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಇಂಗ್ಲೆಂಡ್ ಆಟಗಾರರು ಎಪ್ರಿಲ್ 26ರಂದು ತಂಡವನ್ನು ಸೇರಬೇಕಿದೆ. ಅತ್ತ ಆಸ್ಟ್ರೇಲಿಯಾ ಆಟಗಾರರು ಮೇ 2ರಂದು ರಿಪೋರ್ಟ್ ಮಾಡಬೇಕಿದೆ. ಅಂತಾರಾಷ್ಟ್ರೀಯ ಆಟಗಾರರು ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸಲು ತಾಯ್ನಾಡಿಗೆ ಮರಳಲಿದ್ದಾರೆ. ಇದರಿಂದಾಗಿ ಟೂರ್ನಿಯ ಮಧ್ಯಂತರ ಅವಧಿಯಲ್ಲಿ ಆ‌ರ್‌ಸಿಬಿ ಭಾರಿ ಹಿನ್ನಡೆಯನ್ನು ಅನುಭವಿಸಿದೆ.

ಸ್ಟೇಯ್ನ್ ಗೆ ಗಾಯ:
ಉಳಿದಂತೆ ಕೆಕೆಆರ್ ಮತ್ತು ಸಿಎಸ್ಕೆ ವಿರುದ್ದದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರಕ ಬೌಲರ್ ಡೇಲ್ ಸ್ಟೇಯ್ನ್ ಗಾಯಗೊಂಡಿದ್ದು ಇಡೀ ಐಪಿಎಲ್ ನಿಂದಲೇ ಹೊರ ಉಳಿದಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ಡೇಲ್ ಸ್ಟೇಯ್ನ್ ಆರ್ಸಿಬಿ ತಂಡದ ಬೌಲಿಂಗ್ ಬೆನ್ನೆಲುಬಾಗಿದ್ದರು. ಆದರೆ ಅವರು ಗಾಯಗೊಂಡು ಅಲಭ್ಯರಾಗಿರುವುದರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ಲೇ ಆಫ್​ಗೇರಲು ಕೊಹ್ಲಿ ತಂಡಕ್ಕೆ ಉಳಿದ ಎಲ್ಲ ಪಂದ್ಯ ಬಹುಮುಖ್ಯ. ಹೀಗಿರುಗಾಲೇ ಆಟಗಾರರ ಗೈರು ತಂಡದ ಮೇಲೆ ನೇರ ಪರಿಣಾಮ ಬೀಳದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top