fbpx
ಸಮಾಚಾರ

RCBಗೆ ಗಾಯದ ಮೇಲೆ ಬರೆ- ಐಪಿಎಲ್​ನಿಂದ ಸ್ಟೇನ್ ಔಟ್.

ಸತತ ಸೋಲಿನಿಂದ ಕಂಗೆಟ್ಟಿದ್ದ RCB ತಂಡವು ಸದ್ಯ ಸತತ ಮೂರು ಪಂದ್ಯಗಳ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟುತ್ತಿದೆ. ಆದರೆ ಈ ನಡುವೆ ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿರುವ RCB ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ..

ಲೀಗ್ ಹಂತದ ಮುಂದಿನ ಮೂರು ಪಂದ್ಯಗಳಿಗೆ ಮೊಯಿನ್ ಆಲಿ, ಮಾರ್ಕ್ಯಾಸ್ ಸ್ಟೋನಿಸ್, ಮತ್ತು ಡೇಲ್ ಸ್ಟೇಯ್ನ್ ಅಲಭ್ಯರಾಗಿದ್ದಾರೆ. ಹೌದು, ಮುಂಬರುವ ವಿಶ್ವಕಪ್ ನಿಮಿತ್ತ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡದ ಆಟಗಾರರು ತಮ್ಮ ತಮ್ಮ ದೇಶಕ್ಕೆ ವಾಪಸ್ಸಾಗುತ್ತಿದ್ದು RCBಯ ಪ್ರಮುಖ ಆಟಗಾರರಾದ ಮೊಯಿನ್ ಆಲಿ, ಮಾರ್ಕಸ್ ಸ್ಟಾಯ್ನಿಸ್ ತಮ್ಮ ದೇಶಗಳಿಗೆ ವಾಪಸ್ಸು ಹೋಗುತ್ತಿದ್ದಾರೆ..

ಮೊಯಿನ್ ಆಲಿ,  ಸ್ಟೋಯಿನಿಸ್ ಅಲಭ್ಯತೆಯಿಂದ ಹಿನ್ನಡೆ ಅನುಭವಿಸುತ್ತಿರುವ RCB ತಂಡಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದ್ದು ಸ್ಟಾರ್ ಬೌಲರ್ ಡೆಲ್ ಸ್ಟೇಯ್ನ್ ಗಾಯದ ಕಾರಣದಿಂದ IPLನಿಂದ ಔಟ್ ಆಗಿದ್ದಾರೆ.

ಸ್ಟೇಯ್ನ್ ಗೆ ಗಾಯ:
ಉಳಿದಂತೆ ಕೆಕೆಆರ್ ಮತ್ತು ಸಿಎಸ್ಕೆ ವಿರುದ್ದದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರಕ ಬೌಲರ್ ಡೇಲ್ ಸ್ಟೇಯ್ನ್ ಗಾಯಗೊಂಡಿದ್ದು ಇಡೀ ಐಪಿಎಲ್ ನಿಂದಲೇ ಹೊರ ಉಳಿದಿದ್ದಾರೆ. ಭುಜದ ನೋವಿನಿಂದ ಬಳಲುತ್ತಿರುವ ಡೇಲ್ ಸ್ಟೇಯ್ನ್ ಆರ್ಸಿಬಿ ತಂಡದ ಬೌಲಿಂಗ್ ಬೆನ್ನೆಲುಬಾಗಿದ್ದರು.

ಇಂಜ್ಯೂರಿ ಕಾರಣದಿಂದಾಗಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟೇನ್ ಆಡಿರಲಿಲ್ಲ.ಆರ್​ಸಿಬಿ ತಂಡಕ್ಕೆ ಸ್ಟೇನ್ ಬಂದಾಗಿನಿಂದ ಬೌಲಿಂಗ್ ವಿಭಾಗ ಸಾಕಷ್ಟು ಸುಧಾರಿಸಿತ್ತು. ಆದರೆ ಅವರು ಗಾಯಗೊಂಡು ಅಲಭ್ಯರಾಗಿರುವುದರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ಲೇ ಆಫ್​ಗೇರಲು ಕೊಹ್ಲಿ ತಂಡಕ್ಕೆ ಉಳಿದ ಎಲ್ಲ ಪಂದ್ಯ ಬಹುಮುಖ್ಯ. ಹೀಗಿರುಗಾಲೇ ಆಟಗಾರರ ಗೈರು ತಂಡದ ಮೇಲೆ ನೇರ ಪರಿಣಾಮ ಬೀಳದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top