fbpx
ಸಮಾಚಾರ

“ಅಂಬಿಗಿಂತ ಮೊದಲು ವಿಷ್ಣು ಸ್ಮಾರಕ ನಿರ್ಮಾಣ ಮಾಡಿ” ಸುಮಲತಾ ಹೇಳಿಕೆ.

ಅಂಬರೀಶ್ ಅವರ ಐದನೇ ತಿಂಗಳ ಪುಣ್ಯತಿಥಿ ಪ್ರಯುಕ್ತ ಬುಧವಾರ ಬೆಳಗ್ಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಜ್ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಮಂಡ್ಯ ಪ್ರಚಾರದ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಅಭಿಮಾನಿಗಳಿಗೆ ವಿಷ್ಣು ಸ್ಮಾರಕ ನಿರ್ಮಿಸುವುದಾಗಿ ಆಶ್ವಾಸನೆ ನೀಡಿದ್ದರು. ಚುನಾವಣೆ ಮುಗಿದ ಬಳಿಕ ‘ನೀವು ಎಲ್ಲಿ ಹೇಳ್ತಿರೋ ಅಲ್ಲೆ ಸ್ಮಾರಕ ಮಾಡೋಣ’ ಎಂದು ತಿಳಿಸಿದ್ದರು. ಅದರಂತೆ ವಿಷ್ಣು ಸ್ಮಾರಕ ನಿರ್ಮಿಸಿಲಿ” ಎಂದು ಸುಮಲತಾ ಹೇಳಿದ್ದಾರೆ.

“ವಿಷ್ಣುವರ್ಧನ್ ಅವರ ಸ್ಮಾರಕ ಮೊದಲು ನಿರ್ಮಾಣವಾಗಲಿ, ಆಮೇಲೆ ಬೇಕಾದರೇ ಅಂಬರೀಶ್ ಸ್ಮಾರಕ ಸ್ಥಾಪನೆ ಮಾಡಲಿ. ಸದ್ಯಕ್ಕೆ, ಅಂಬಿ ಸ್ಮಾರಕಕ್ಕಾಗಿ ಬಜೆಟ್ ನಲ್ಲೂ ಏನೂ ಘೋಷಣೆ ಮಾಡಿರಲಿಲ್ಲ. ಸಮಯ ಬಂದಾಗ ಚಿತ್ರರಂಗದ ಪರವಾಗಿ ಎಲ್ಲರೂ ನಿರ್ಧಾರ ತೆಗೆದುಕೊಂಡು ಅದನ್ನ ಟೇಕ್ ಆನ್ ಮಾಡ್ತೀವಿ” ಎಂದು ಸುಮಲತಾ ಹೇಳಿದರು.

ಮಂಡ್ಯ ಪ್ರಚಾರದ ವೇಳೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಅಭಿಮಾನಿಗಳಿಗೆ ವಿಷ್ಣು ಸ್ಮಾರಕ ನಿರ್ಮಿಸುವುದಾಗಿ ಆಶ್ವಾಸನೆ ನೀಡಿದ್ದರು. ಚುನಾವಣೆ ಮುಗಿದ ಬಳಿಕ ‘ನೀವು ಎಲ್ಲಿ ಹೇಳುತ್ತಿರೋ ಅಲ್ಲೆ ಸ್ಮಾರಕ ಮಾಡೋಣ’ ಎಂದು ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top