fbpx
ಸಮಾಚಾರ

ವಿಶ್ವಕಪ್‌ಗೆ ಬಲಿಷ್ಠ ತಂಡವನ್ನೇ ಪ್ರಕಟಿಸಿದ ವೆಸ್ಟ್ ಇಂಡೀಸ್- ಹೀಗಿದೆ ನೋಡಿ ದೈತ್ಯರ ತಂಡ.

ಜೂನ್ ತಿಂಗಳಿನಿಂದ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದ್ದು, 15 ಸದಸ್ಯರ ತಂಡದಲ್ಲಿ ಸ್ಫೋಟಕ ಆಟಗಾರರಾದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ರಸೆಲ್‌ಗೆ ಸ್ಥಾನ ನೀಡಲಾಗಿದೆ.

ಜೇಸನ್ ಹೋಲ್ಡರ್ ವೆಸ್ಟ್ ಇಂಡೀಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದು ಸ್ಫೋಟಕ ಬ್ಯಾಟ್ಸ್‌ಮನ್ ಕಾರ್ಲೋಸ್ ಬ್ರಾಥ್ವೈಟ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಹಿರಿಯ ಆಲ್ ರೌಂಡರ್ ಕಿರಾನ್ ಪೊಲಾರ್ಡ್ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಪಲರಾಗಿದ್ದಾರೆ. ನಾಲ್ಕು ವರ್ಷಗಳ ನಂತರ ವಿಂಡೀಸ್ ತಂಡದಲ್ಲಿ ರಸೆಲ್ ಸ್ಥಾನ ನೀಡಲಾಗಿದೆ. 2015ರಲ್ಲಿ ಕೊನೆಯ ಬಾರಿ ವೆಸ್ಟ್ ಇಂಡೀಸ್​ ಪರ ರಸೆಲ್ ಕಣಕ್ಕಿಳಿದಿದ್ರು.

 

 

ಹೀಗಿದೆ ವಿಂಡೀಸ್ ತಂಡ:
ಜೇಸನ್ ಹೋಲ್ಡರ್(ನಾಯಕ),
ಕ್ರಿಸ್ ಗೇಲ್,
ಆಯಂಡ್ರೆ ರಸೆಲ್,
ಶಿಮ್ರನ್ ಹೆಟ್ಮೆಯರ್,

ಆಯಶ್ಲೆ ನರ್ಸ್,
ಕಾರ್ಲೋಸ್ ಬ್ರಾಥ್ವೈಟ್,
ಡರೆನ್ ಬ್ರಾವೋ,
ಎವಿನ್ ಲಿವಿಸ್,
ಫ್ಯಾಬಿಯ ನ್ ಅಲೆನ್,

ಕೆಮರ್ ರೋಚ್,
ನಿಕೋಲಸ್ ಪೂರನ್,
ಒಶಾನೆ ಥಾಮಸ್,
ಶೈ ಹೋಪ್,

ಶ್ಯಾನನ್ ಗೆಬ್ರಿಯಲ್,
ಶೆಲ್ಡನ್ ಕಾಟ್ರೆಲ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top