fbpx
ಸಮಾಚಾರ

“ಬೆಂಗಳೂರಿನಲ್ಲಿ ಆಡುತ್ತಿರುವುದೇ ನನ್ನ ಸೌಭಾಗ್ಯ” ಮಿ.360 ಖ್ಯಾತಿಯ ಎಬಿಡಿ.

ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವದ ಅತ್ಯುತ್ತಮ ಮೈದಾನಗಳಲ್ಲಿ ಒಂದು. ಆರ್‌ಸಿಬಿ ತಂಡದಲ್ಲಿರುವುದು ನನ್ನ ಸೌಭಾಗ್ಯ. ಆರ್‌ಸಿಬಿ ಅಭಿಮಾನಿಗಳನ್ನು ಕಂಡಾಗ ಮೈ ಪುಳಕಗೊಳ್ಳುತ್ತದೆ. ಇಲ್ಲಿನ ಫ್ಯಾನ್ಸ್​ಗಳು ನನಗೆ ಸ್ಪೆಷಲ್ ಎಂದು ಆರ್​ಸಿಬಿ ತಂಡದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

‘ಮಿಸ್ಟರ್ 360 ಡಿಗ್ರಿ’ ಎಂಬ ಖ್ಯಾತಿಗೆ ತಕ್ಕಂತೆ ಆಡಿದ ಎಬಿ ಡಿವಿಲಿಯರ್ಸ್‌ ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಜಯದ ಸಿಹಿ ಉಣಿಸಿದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಎಬಿಡಿ, ಫೀಲ್ಡಿಂಗ್‌ನಲ್ಲಿಯೂ ಮಿಂಚಿನ ಸಂಚಲನ ಮೂಡಿಸಿದರು. ಇದರಿಂದಾಗಿ ಆರ್‌ಸಿಬಿ ತಂಡವು 17 ರನ್‌ಗಳಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಜಯಿಸಿತು.

ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ವಿಲಿಯರ್ಸ್, “ಇದು ವಿಶ್ವದ ಅತ್ಯುತ್ತಮ ಅಭಿಮಾನಿಗಳ ಬಳಗವನ್ನು ಹೊಂದಿದೆ.ಸೋಲೇ ಆಗಲಿ, ಗೆಲುವೇ ಆಗಲಿ ಬೆಂಗಳೂರಿನ ಅಭಿಮಾನಿಗಳು ಯಾವತ್ತೂ ಆರ್‌ಸಿಬಿ ತಂಡದ ಬೆಂಗಾವಲಿಗೆ ನಿಂತಿದ್ದಾರೆ. ” ಎಂದು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

“ಬೆಂಗಳೂರಿನ ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ ತನಗೆ ಅತಿ ಹೆಚ್ಚು ಪ್ರೀತಿ ದೊರಕಿದೆ. ನನಗಿಲ್ಲಿ ಆಡುವುದೆಂದರೆ ತುಂಬಾನೇ ಇಷ್ಟ” ಎಂದು ವಿವರಿಸಿದ್ದಾರೆ. ಬೆಂಗಳೂರು ಅಭಿಮಾನಿಗಳ ಪ್ರೀತಿಯನ್ನೇ ಇದನ್ನೇ ಬೊಟ್ಟು ಮಾಡಿರುವ ವಿಲಿಯರ್ಸ್, ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಗುಣಗಾನ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದಂತೆ ಭಾರತದಲ್ಲೂ ಅತಿ ಹೆಚ್ಚು ಪ್ರೀತಿ ದೊರಕಿದೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top