fbpx
ಸಮಾಚಾರ

ನಟಸಾರ್ವಭೌಮನನ್ನು ನೆನೆದ ಬಾಹುಬಲಿ ನಟಿ

ಕನ್ನಡದ ಮೇರು ನಟ ಡಾ ರಾಜ್ ಕುಮಾರ್ ಅವರ 90ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗಿದೆ. ಜೊತೆಗೆ ಕನ್ನಡ ಸ್ಟಾರ್ ನಟ-ನಟಿಯರು ರಾಜಣ್ಣ ಅವರನ್ನು ನೆನಪಿಸಿಕೊಂಡು ಅವರಿಗೆ ಶುಭಕೋರಿದ್ದರು. ಆದರೆ ಇದೀಗ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರು ಕೂಡ ಅವರನ್ನು ನೆನಪಿಸಿಕೊಂಡಿದ್ದಾರೆ.

ರಾಜ್ಯಾದ್ಯಂತ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಎಲ್ಲರೂ ಸ್ಮರಿಸುವಾಗ ಅನುಷ್ಕಾ ಶೆಟ್ಟಿ ರಾಜ್‌ರಿಗೆ ನಮನ ಸಲ್ಲಿಸುವುದನ್ನು ಮರೆಯಲಿಲ್ಲ. ಕರಾವಳಿಯ ಈ ಬೆಡಗಿ ಫೇಸ್‌ಬುಕ್‌ನಲ್ಲಿ ರಾಜ್‌ ಕುಮಾರ್‌ ಫೋಟೋ ಹಾಕಿ ‘ಡಾ. ರಾಜ್‌ಕುಮಾರ್‌ ಸರ್‌ 90ನೇ ಹುಟ್ಟುಹಬ್ಬದಂದು ಸ್ಮರಿಸುತ್ತಿದ್ದೇನೆ..ಅವರು ಲೆಜೆಂಡ್‌’ ಎಂದು ಬರೆದುಕೊಂಡಿದ್ದಾರೆ.

 


 

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ಅನುಷ್ಕಾ ಕರ್ನಾಟಕದ ಕರಾವಳಿ ಬೆಡಗಿ. ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರುವ ಸ್ವೀಟಿ, ಮೇರು ನಟನ ಹುಟ್ಟುಹಬ್ಬವನ್ನು ನೆನಪಸಿಕೊಂಡು ಶುಭಕೋರಿರುವುದು ಕನ್ನಡಿಗರಿಗೆ ಅನುಷ್ಕಾ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ.

ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶೆಟ್ಟಿ ಸದ್ಯಕ್ಕೆ ಸೈಲೆನ್ಸ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದಾದ ನಂತರ ಐಶ್ಚರ್ಯ ರೈ ಜೊತೆ ಸಿನಿಮಾ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top