fbpx
ಭವಿಷ್ಯ

ಏಪ್ರಿಲ್ 27- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ

ಸ್ಥಳ- ಬೆಂಗಳೂರು.
ಶನಿವಾರ , ಏಪ್ರಿಲ್ 27 2019
ಸೂರ್ಯೋದಯ : 6:02 am
ಸೂರ್ಯಾಸ್ತ: 6:33 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಚೈತ್ರ
ಪಕ್ಷ : ಕೃಷ್ಣಪಕ್ಷ
ತಿಥಿ :ಸಪ್ತಮೀ 14:40
ನಕ್ಷತ್ರ :Uttaraashadha 23:15
ಯೋಗ :ಸಾಧ್ಯ 25:35
ಕಾರಣಂ: ಬಾವ 14:40 ಬಾಲವ 27:48

ಅಭಿಜಿತ್ ಮುಹುರ್ತ:11:52 am – 12:42 pm
ಅಮೃತಕಾಲ :4:09 pm – 5:55 pm

ರಾಹು ಕಾಲ:10:44 am – 12:17 pm
ಗುಳಿಕ ಕಾಲ:7:38 am – 9:11 am
ಯಮಗಂಡ: 3:23 pm – 4:56 pm

 

ವ್ಯಾಜ್ಯಗಳು ಇದ್ದರೂ ಗೊಂದಲಕ್ಕೆ ಅವಕಾಶ ಬೇಡ. ಸ್ನೇಹಿತರ ಸೂಕ್ತವಾದ ಸಹಾಯದಿಂದ ಒತ್ತಡಗಳಿಗೆ ವಿರಾಮ ಹಾಕುವಿರಿ.  ಹಣದ ಕೊರತೆಯು ಕಹಿ ಎನಿಸುವುದು.

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ನೀಡುತ್ತಿರುವುದು ನಿಮ್ಮ ಒಳ್ಳೆಯದಕ್ಕೆ. ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ಹೋಗುವ ನಿಮ್ಮ ಮನಸ್ಥಿತಿಯನ್ನು ಪರಿವರ್ತಿಸಿಕೊಳ್ಳಬೇಕಾಗಿದೆ. ಹಣದ ಉಳಿತಾಯದ ಬಗ್ಗೆ ಗಮನ ಹರಿಸಿ.

ಗೆಳೆಯರ ಬಳಿ ಸ್ನೇಹದಿಂದ ಇರುವುದು ಉತ್ತಮ. ಆದರೆ ಯಾರಿಗೂ ಸಾಲ ಕೊಡುವುದು ಕೊಡಿಸುವುದು ಮಾಡದಿರಿ. ನೀವೂ ಸಾಲ ಪಡೆಯದಿರಿ. ಕಡತಗಳ ವಿಚಾರ ವಿವಾದಗಳಿಗೆ ಕಾರಣವಾಗುವ ಸಂದರ್ಭ ಎದುರಾಗುವುದು.

ನೆರೆಹೊರೆಯವರಲ್ಲಿ ಹೆಚ್ಚಿನ ಮಾತುಕತೆಯಿರಲಿ ಹಾಗೂ ಅದು ಸ್ನೇಹಪೂರ್ಣವಾಗಿರಲಿ ಮತ್ತು ಸೌಜನ್ಯ ಪೂರಕವಾಗಿರಲಿ. ಆದರೆ ಎಲ್ಲರನ್ನೂ ಪೂರ್ತಿಯಾಗಿ ನಂಬದಿರಿ. ಸಲಹೆಗಳು ನಿಮ್ಮದು ತೀರ್ಮಾನ ನನ್ನದು ಎಂಬ ಧೋರಣೆ ಇರಲಿ.

 

ನಿಮ್ಮ ಪಾಲಿಗೆ ಅದೃಷ್ಟ ಬರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.

 

ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆಯು ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.

 

ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ಕೆಲ ವಿಚಾರಗಳ ಬಗ್ಗೆ ಸಮ್ಮತಿ ಸೂಚಿಸಿ. ಆಗ ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೊಸತನ ಮೂಡಿಬರುವುದು.

 

ನಿಮ್ಮ ವೈರಿಗಳ ಬಗ್ಗೆ ಎಚ್ಚರಿಕೆ ಇರಲಿ. ಈ ಬಗ್ಗೆ ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಿಂದಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷ ಕನಾದ ಶ್ರೀಲಕ್ಷ್ಮೀನಾರಸಿಂಹನನ್ನು ನೆನೆಯಿರಿ.

 

ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.

ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಇಲ್ಲ.

 

 

ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ ತಮಾಷೆಯನ್ನು ಮಾಡಲು ಹೋಗಿ  ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರಿ. ಇದರಿಂದ ಒಳಿತಾಗುವುದು.

ಸಂತೋಷಕ್ಕೆ ಅನೇಕ ದಾರಿಗಳಿವೆ. ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೇರಳವಾಗಿವೆ. ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top