fbpx
ಸಮಾಚಾರ

ವಾಯು ಮಾಲಿನ್ಯ ಮುಕ್ತ ಭಾರತಕ್ಕೆ ನಿತಿನ್ ಗಡ್ಕರಿ ಮಾಸ್ಟರ್ ಪ್ಲಾನ್.

ಪರಿಸರ ಮಾಲಿನ್ಯಕ್ಕೆ ತಡೆಹಾಕುವ ನಿಟ್ಟಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ ನಲ್ಲಿ ಮಾತನಾಡಿರುವ ಹಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ.

ತ್ಯಾಜ್ಯದಿಂದ ಉತ್ಪಾದಿಸುವ ನೈಸರ್ಗಿಕ ಅನಿಲವನ್ನು ಒಂದು ಸಾವಿರ ಬಸ್‌ಗಳಿಗೆ ಇಂಧನವಾಗಿ ಬಳಸ ಬಹುದು. ಉಳಿ ಯುವ ಜೈವಿಕ ಡೀಸೆಲ್‌ ಅನ್ನು ಜನರೇಟರ್‌ಗಳಿಗೂ ಬಳಸಬಹುದು. ಮಹಾರಾಷ್ಟ್ರದಲ್ಲಿ ಡೀಸೆಲ್‌ಗಿಂತ ಕಡಿಮೆ ಬೆಲೆಗೆ 30 ಸಾವಿರ ಲೀಟರ್‌ ಜೈವಿಕ ಡೀಸೆಲ್‌ ಪೂರೈಸಲಾಗಿದೆ ಎಂದರು.

ತ್ಯಾಜ್ಯದ ಹೊರತಾಗಿ ದೆಹಲಿಯ ಅಜಾದ್‌ಪುರ ಮಂಡಿಯಲ್ಲಿ ಕೊಳೆತು ಹೋಗುವ ಲಕ್ಷಾಂತರ ಟನ್‌ ತರಕಾರಿ ಯನ್ನು ಜೈವಿಕ ಡೀಸೆಲ್‌ ಉತ್ಪಾದಿಸಲು ಬಳಸಬಹುದಾಗಿದೆ ಎಂದರು. ರೈತರು ಕಬ್ಬಿನ ಕೊಳೆ ಹಾಗೂ ಕೃಷಿ ಉತ್ಪನ್ನಗಳಿಂದ ಜೈವಿಕ ಇಂಧನ ಉತ್ಪಾದಿಸಲು ಮುಂದಾದರೆ ಪ್ರತಿ ವರ್ಷ ಕಚ್ಚಾತೈಲ ಆಮದಿಗೆ ದೇಶ ಖರ್ಚು ಮಾಡುತ್ತಿರುವ ಎಂಟು ಲಕ್ಷ ಕೋಟಿ ರೂಪಾಯಿ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಗಡ್ಕರಿ ಅಭಿಪ್ರಾಯಪಟ್ಟರು.

ಪರ್ಯಾಯ ಇಂಧನಗಳಾದ ಇಥೆನಾಲ್‌, ಮಿಥೆನಾಲ್‌, ಜೈವಿಕ ಇಂಧನ ಮತ್ತು ಸಿಎನ್‌ಜಿ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾದಲ್ಲಿ ಪೆಟ್ರೋಲಿಯಂ ಮೇಲಿನ ಅವಲಂಬನೆ ಕಡಿಮೆಯಾಗಿ ಪೆಟ್ರೋಲ್‌, ಡೀಸೆಲ್‌ ದರಗಳು ಇಳಿಯಲಿವೆ. ಜೈವಿಕ ಇಂಧನ ಉತ್ಪಾದನೆ ಮಾಡುವ ತಾಕತ್ತು ಭಾರತಕ್ಕಿದೆ” ಎಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top