fbpx
ಸಮಾಚಾರ

ಕೊನೆಗೂ ಮೋದಿ ನಾಮಪತ್ರದಲ್ಲಿ ಪತ್ನಿ ಹೆಸರು- ಅರ್ಧಾಂಗಿ ಆಸ್ತಿ ಬಗ್ಗೆ ನಾಮಪತ್ರದಲ್ಲಿರುವುದೇನು ಗೊತ್ತಾ?

ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರದಲ್ಲಿ ಪ್ರಧಾನಿ ಮೋದಿ ತಮ್ಮ ಆಸ್ತಿ ಸೇರಿದಂತೆ ಇತರ ವೈಯಕ್ತಿಕ ವಿವರ ಸಲ್ಲಿಸಿದ್ದಾರೆ.. ಮೋದಿ ಸಲ್ಲಿಸಿದ ಅಫಿಡವಿಟ್’ನಲ್ಲಿ ಪತ್ನಿಯ ಕಾಲಂ ಭರ್ತಿ ಮಾಡಿದ್ದು, ಜಶೋಧಾಬೆನ್ ಎಂದು ಹೆಸರು ಉಲ್ಲೇಖಿಸಿದ್ದಾರೆ. ಆದರೆ ಅವರ ಆಸ್ತಿ ವಿವರ ಮತ್ತು ಇನ್ನಿತರ ವೈಯಕ್ತಿಕ ವಿವರಗಳ ಕಾಲಂನಲ್ಲಿ NOT KNOWN ಎಂದು ನಮೂದಿಸಿದ್ದಾರೆ.

ಆದರೆ ನಿಯಮದ ಪ್ರಕಾರ ಮೋದಿ ಪತ್ನಿಯ ಪಾನ್​ ಕಾರ್ಡ್​ ನಂಬರ್, ಆಸ್ತಿ ವಿವರ, ಚಿನ್ನಾಭರಣದ ವಿವರ ನೀಡಬೇಕು. ಈ ಎಲ್ಲ ವಿವರಗಳ ಜಾಗದಲ್ಲಿ ಮೋದಿ ಮಾಹಿತಿ ಇಲ್ಲ(not know) ಎಂದು ನಮೂದಿಸಿದ್ದಾರೆ.

ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ, ಬಹುತೇಕರು ಮೋದಿ ಅವಿವಾಹಿತ ಎಂದೇ ನಂಬಿದ್ದರು. ಮೋದಿ ಅವರು ಸಹ ಸಂದರ್ಶನವೊಂದರಲ್ಲಿ ತಾವು ಅವಿವಾಹಿತ ಎಂದು ಹೇಳಿಕೊಂಡಿದ್ದು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ ಅವರು ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡ ನಂತರ ಮೋದಿ ಅವರಿಗೆ ಮದುವೆಯಾಗಿರುವುದು ಬೆಳಕಿಗೆ ಬಂತು, ಮೋದಿ ಅವರು ಯಶೋಧಾಬೆನ್ ಎಂಬುವರನ್ನು ಬಹು ಮುಂಚೆಯೇ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು, ಆದರೆ ನಂತರ ಸಂಸಾರವನ್ನು ತ್ಯಜಿಸಿ ಹೊರಟುಬಿಟ್ಟಿದ್ದು ಈಗ ಇತಿಹಾಸ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top