fbpx
ಸಮಾಚಾರ

ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಬಗ್ಗೆ ಭವಿಷ್ಯ ಹೇಳಿದಳೇ ಮದ್ದೂರಮ್ಮ?

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಇಡೀ ಇಂಡಿಯಾವೇ ಮಂಡ್ಯ ಮೇಲೆ ಕಣ್ಣು ನೆಟ್ಟಿತ್ತು. ಅದರಂತೆ ಮಂಡ್ಯದಲ್ಲಿ ದಾಖಲೆಯ ಶೇಕಡ 80ರಷ್ಟು ಮತದಾನ ಕೂಡ ಆಗಿದೆ. ಮತದಾನ ನಂತರ ಮಂಡ್ಯದಲ್ಲಿ ಹಲವಾರು ಬೆಳವಣಿಗೆಗಳು ಮಂಡ್ಯದಲ್ಲಿ ನಡೆದಿದೆ.

ಮಂಡ್ಯದಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎನ್ನುವುದನ್ನು ತಿಳಿಯಲು ಜನರು ಈಗ ಭವಿಷ್ಯದ ಮೊರೆ ಹೋಗಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಭವಿಷ್ಯದ ಬಗ್ಗೆ ಮದ್ದೂರವ್ವ ಭವಿಷ್ಯ ಹೇಳಿದಳಾ? ಈ ಭವಿಷ್ಯದ ಪ್ರಕಾರ ನಿಖಿಲ್ ಸೋಲುತ್ತಾರಾ ಎನ್ನುವ ಚರ್ಚೆ ಹುಟ್ಟಿದೆ.

ನಿಖಿಲ್ ಗೆಲುವಿಗಾಗಿ ದೇವೇಗೌಡರ ಪುತ್ರ ಡಾ. ರಮೇಶ್ ಅವರ ಪತ್ನಿ ಸೌಮ್ಯಾ ರಮೇಶ್ ಹರಕೆ ಹೊತ್ತಿದ್ದರು. ಮೇಕೆಯನ್ನು ತೆಗೆದುಕೊಂಡು ಹರಕೆ ತೀರಿಸಲು ಮದ್ದೂರವ್ವ ದೇವಾಲಯದ ಬಳಿ ತೆರಳಿದಾಗ ಮೇಕೆ ತಲೆ ಒದರಲಿಲ್ಲವಂತೆ. ಸೌಮ್ಯಾ ರಮೇಶ್ ಅವರು ಗಂಟೆ ಗಟ್ಟಲೇ ಸ್ಥಳದಲ್ಲಿ ಕಾದರೂ ಕೂಡ ಆಡು ತಲೆ ಆಡಿಸದೇ ನಿಂತಿದ್ದರಿಂದ ಆತಂಕಕೊಂಡಿದ್ದಾರೆ. ಮತ್ತೊಂದು ಆಡು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸುವುದಾಗಿ ಹೇಳಿ ವಾಪಸಾಗಿದ್ದಾರೆ.

ಅಂದಹಾಗೆ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ತೀವ್ರವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಹಾಗೆಂದು ಅವರಿಗೆ ಮಂಡ್ಯದಲ್ಲಿನ ಗೆಲುವು ಸುಲಭವಲ್ಲ. ಅವರ ಎದುರು ಇರುವುದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಷ್. ಅವರಿಗೆ ಬಿಜೆಪಿಯ ಬೆಂಬಲ ದೊರಕಿದೆ. ಕಾಂಗ್ರೆಸ್‌ನ ಅತೃಪ್ತ ಮುಖಂಡರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇಲ್ಲಿ ನಿಕಟ ಪೈಪೋಟಿ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top