fbpx
ಸಮಾಚಾರ

ವಾರಣಾಸಿಯಿಂದ ಕಣಕ್ಕಿಳಿದಿರುವ ಪ್ರಧಾನಿ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಜೊತೆಗೆ ಅಫಿಡವಿಟ್ ನಲ್ಲಿ ತಮ್ಮ ಆದಾಯದ ವಿವರವನ್ನು ಘೋಷಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಒಟ್ಟು 2,51,36,119 ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಯಾವುದೇ ಸಾಲವನ್ನು ಮಾಡಿಲ್ಲ. ಸದ್ಯ ಅವರ ಕೈಯಲ್ಲಿ ಕೇವಲ 38,750 ರೂ. ಮಾತ್ರ ಇದೆ ಎಂದು ತಿಳಿಸಿದ್ದಾರೆ. ಗಾಂಧಿನಗರದಲ್ಲಿ ಪ್ಲಾಟ್ ಒಂದನ್ನು ಹೊಂದಿದ್ದಾರೆ. ಸರ್ವೆ ನಂಬರ್ 411 ರಲ್ಲಿದೆ. ಪ್ಲಾಟ್ ನಂಬರ್ 401 ಎ ಆಗಿದೆ. ಅದರ ಮೌಲ್ಯ 1,10,00,000 ರೂಪಾಯಿ ಆಗಿದೆ.

ನಗದು ಹಣದಲ್ಲಿ 2014ರಲ್ಲಿ ಇದ್ದ ಮೊತ್ತಕ್ಕೂ 2019ರಲ್ಲಿ ಇರುವ ಮೊತ್ತಕ್ಕೂ ಶೇ.114.15ರಷ್ಟು ಹೆಚ್ಚಳ ಕಂಡು ಬಂದಿದೆ. 2014ರಲ್ಲಿ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವೇಳೆ ನಗದು ಮೊತ್ತ ₹ 65,91,582 ಇತ್ತು. ಮೋದಿ ಪಡೆಯುತ್ತಿರುವ ಸರ್ಕಾರಿ ಸಂಬಳ ಹಾಗೂ ಉಳಿತಾಯದ ಮೇಲಿನ ಬಡ್ಡಿಯೇ ಆದಾಯದ ಮೂಲ ಎನ್ನಲಾಗಿದೆ.

ಪ್ರಮಾಣಪತ್ರದಲ್ಲಿ ಮೋದಿ ತಾನು ಯಾವುದೇ ಕ್ರಿಮಿನಲ್ ಆರೋಪವಾಗಲಿ, ವಿಚಾರಣೆಯನ್ನಾಗಲಿ ಎದುರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಆಸ್ತಿಘೋಷಣೆ ಪ್ರಮಾಣ ಪತ್ರದಲ್ಲಿ ಮೂರು ವಿಭಾಗಗಳಿದ್ದು, ಅವುಗಳೆಂದರೆ, ಸ್ಥಿರಾಸ್ತಿ, ಚರಾಸ್ತಿ ಮತ್ತು ಹೊಣೆಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top