fbpx
ಸಮಾಚಾರ

ರವಿಚಂದ್ರನ್ ಪುತ್ರಿ ಮದುವೆಯ ಸ್ಪೆಷಲ್ 3ಡಿ ಆಹ್ವಾನ ಪತ್ರಿಕೆಯ ಬೆಲೆ ಎಷ್ಟು ಗೊತ್ತಾ?

ರವಿಚಂದ್ರನ್‌ ಪುತ್ರಿ ಗೀತಾಂಜಲಿ ಅವರ ಮದುವೆ ಉದ್ಯಮಿ ಅಜಯ್‌ ಅವರ ಜತೆ ಮೇ 28 ಮತ್ತು 29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮೊನ್ನೆಯಷ್ಟೇ ವಿಶೇಷ ಹಾಡಿನ ಮೂಲಕ ಮಗಳಿಗೆ ಮದುವೆಯ ಉಡುಗೊರೆ ಕೊಟ್ಟಿದ್ದ ರವಿಮಾಮ ಇದೀಗ ಮಗಳ ಮದುವೆಗೆ ವಿಶೇಷವಾದ ಆಹ್ವಾನ ಪತ್ರಿಕೆ ಸಿದ್ಧಪಡಿಸಿದ್ದಾರೆ. ತಮ್ಮದೇ ಸ್ಕೆಚ್​ ಇರುವಂತಹ ಇನ್ವಿಟೇಷನ್​ ಮಾಡಿಸಲಾಗಿದ್ದು, ರವಿ ಫ್ಯಾಮಿಲಿಯಿಂದ ಪ್ರೀತಿಯ ಆಹ್ವಾನ ನೀಡಿದ್ದಾರೆ.

 

 

ರವಿಚಂದ್ರನ್ ಏನೇ ಮಾಡಿದರೂ ಭಿನ್ನವಾಗಿರುತ್ತದೆ. ಹಾಗಾಗಿ ತಮ್ಮ ಮಗಳ ಮದುವೆಗೆ ತಾವೇ ಸ್ವತಃ ಮದುವೆ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದಾರೆ. ರವಿಚಂದ್ರನ್ ತಮ್ಮ ಮಗಳ ಮದುವೆಗೆ ವಿಶೇಷವಾಗಿ 3D ಆಮಂತ್ರಣ ಪತ್ರಿಕೆಯನ್ನು ಮಾಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ರವಿಚಂದ್ರನ್ ಫೋಟೋ, ಮದುವೆಯ ವಿವರ ಹಾಗೂ ಕುಟುಂಬದವರ ಹೆಸರಿದೆ. ಸುಮಾರು ₹3 ಸಾವಿರ ರೂಪಾಯಿ ಬೆಲೆ ಬಾಳುವ ಈ ಆಹ್ವಾನ ಪತ್ರಿಕೆ ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ಎನ್ನುವಂತೆ ತುಂಬಾ ವಿಶೇಷವಾಗಿ 3D ಮದುವೆ ಆಮಂತ್ರಣ ಪತ್ರಿಕೆ ಮಾಡಿಸಲಾಗಿದೆ.

ಕಳೆದ ತಿಂಗಳಷ್ಟೇ ಗೀತಾಂಜಲಿ ಅವರ ನಿಶ್ಚಿತಾರ್ಥ ನೆರವೇರಿತ್ತು. ನಿಶ್ಚಿತಾರ್ಥಕ್ಕೆ ಕೇವಲ ಕುಟುಂಬಕ್ಕಷ್ಟೇ ಆಹ್ವಾನ ನೀಡಲಾಗಿತ್ತು. ಹಾಗಾಗಿ ಮದುವೆಯನ್ನು ಎರಡು ದಿನಗಳ ಕಾಲ ಅದ್ಧೂರಿಯಾಗಿ ಮಾಡಲು ಎರಡು ಕುಟುಂಬಗಳು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ಬಹುತೇಕ ತಾರೆಯರು ಮತ್ತು ಬಾಲಿವುಡ್‌ನ ನಟ ನಟಿಯರು ಈ ಮದುವೆಗೆ ಬರುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top