fbpx
ಸಮಾಚಾರ

20 ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆ; ಹೊಸ ನೋಟಿನ ವಿಶೇಷತೆ ಗೊತ್ತಾ?

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20 ರೂ. ಮುಖಬೆಲೆಯ ಹೊಸ ನೋಟಿನ ಮಾದರಿಯನ್ನು ಪರಿಚಯಿಸಿದೆ. ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ನೋಟ್ ಹೊಂದಿದ್ದು, ಹೊಸ ಸಿರೀಸ್ ಜೊತೆಗೆ ಗರ್ವನರ್ ಶಕ್ತಿಕಾಂತ್ ದಾಸ್ ಅವರ ಸಹಿಯನ್ನು ಹೊಂದಿರಲಿದೆ. ಈ ಹೊಸ ನೋಟು ಚಲಾವಣೆಗೆ ಬಂದ ನಂತರ ಸಹ ಹಳೆಯ 20 ರು. ನೋಟುಗಳು ಹಾಗೆಯೇ ಚಲಾವಣೆಯಲ್ಲಿರಲಿದ್ದು ಇದಕ್ಕೆ ಯಾವ ಕಾನೂನಿನ ಅಡ್ಡಿ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

20 ರೂ. ಮುಖಬೆಲೆಯ ಹೊಸ ನೋಟು ಹಸಿರು ಮತ್ತು ಹಳದಿ ಮಿಶ್ರಣದ ಬಣ್ಣವನ್ನು ಹೊಂದಿರಲಿದೆ. ನೋಟು ಹಿಂಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಎಲ್ಲೋರ ಗುಹಾಲಯ ಚಿತ್ರ ಹೊಂದಿರಲಿದೆ. ಹೊಸ ನೋಟುಗಳ ಜೊತೆಗೆ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಹೊಸ ನೋಟು 63 ಮಿ.ಮಿ*129 ಮಿಮಿ ಅಳತೆ ಹೊಂದಿದೆ.

ಮಧ್ಯದಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ಹೊಂದಿ ಸೂಕ್ಷ್ಮ ಅಕ್ಷರಗಳಲ್ಲಿ ‘ಆರ್ಬಿಐ’, ‘ಭಾರತ್’, ‘ಇಂಡಿಯಾ’ ಮತ್ತು ’20 ‘ ಎಂದು ಬರೆಯಲಾಗಿದೆ. ಆರ್ಬಿಐ ಲಾಂಛನದೊಂದಿಗೆ ಗವರ್ನರ್ ಸಹಿ, ಸಹ ನೋಟಿನಲ್ಲಿ ಇರಲಿದೆ. ಗಾಂಧಿ ಭಾವಚಿತ್ರದ ಬಲಭಾಗದಲ್ಲಿ – ಅಶೋಕ ಸ್ಥಂಭ, ಮತ್ತು ಎಲೆಕ್ಟ್ರಾಟೈಪ್ ನಲ್ಲಿ 20 ಎಂದು ಮುದ್ರಿಸಲಾಗಿದೆ..

ಅಂದಹಾಗೆ 2016ರ ನವೆಂಬರ್ 8 ರಂದು 1ಸಾವಿರ ಹಾಗೂ 500 ರುಪಾಯಿಯ ನೋಟುಗಳು ನಿಷೇಧವಾಗಿತ್ತು ಆ ಬಳಿಕ ದೇಶಾದ್ಯಂತ ಉಂಟಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಹೊಸ 200 ರೂ. 50 ರೂ. ಹಾಗೂ 10ರೂ ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top