fbpx
ಸಮಾಚಾರ

ಎರಡು ಭಾಷೆಗಳಲ್ಲಿ ರೆಡಿಯಾಗುತ್ತಿದೆ ಮಾಜಿ ಪ್ರಧಾನಿ ದೇವೇಗೌಡರ ಜೀವನ ಚರಿತ್ರೆ..

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಅವರ ಜೀವನಚರಿತ್ರೆ ಪುಸ್ತಕ ಎರಡು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಜೀವನ ಚರಿತ್ರೆಯಲ್ಲಿ ಗೌಡರ ರಾಜಕೀಯ ಜೀವನದ ಎಲ್ಲ ತಿರುವುಗಳ ಬಗ್ಗೆ ಮಾಹಿತಿ ಇರಲಿದೆ. ಹಳ್ಳಿಯಲ್ಲಿ ಹುಟ್ಟಿದ ಸಾಮಾನ್ಯ ವ್ಯಕ್ತಿಯೊಬ್ಬ ದಿಲ್ಲಿಯ ಅಧಿಕಾರಿ ಚುಕ್ಕಾಣಿ ಹಿಡಿದು ಹೇಗೆ ಸವಾಲುಗಳನ್ನು ಎದುರಿಸಿದ್ದರು ಎಂಬ ಬಗ್ಗೆ ದೇವೇಗೌಡ ಅವರ ಅನುಭವಕ್ಕೆ ಅಕ್ಷರ ರೂಪ ನೀಡಲು ಹೊರಟಿರುವ ಬಗ್ಗೆ ಈಗಾಗಲೇ ಬಹಿರಂಗವಾಗಿದೆ.

ಹಾಸನದ ಹರದನಹಳ್ಳಿಯಿಂದ ನವದೆಹಲಿಯ ಕೆಂಪುಕೋಟೆವರೆಗಿನ ಎಚ್.ಡಿ.ದೇವೇಗೌಡ ಜೀವನ ಚರಿತ್ರೆಯನ್ನು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಕನ್ನಡದಲ್ಲಿ ಬರೆಯುತ್ತಿದ್ದು, ಇಂಗ್ಲಿಷ್​ನಲ್ಲೂ ಸಿದ್ಧವಾಗುತ್ತಿದೆ. ಆಂಗ್ಲ ಆವೃತ್ತಿ ಕರಡನ್ನು ಖುದ್ದು ಗೌಡರು ದೆಹಲಿಯಲ್ಲಿ ಕುಳಿತು ಪರಿಶೀಲಿಸುತ್ತಿದ್ದಾರೆ.

ತಮ್ಮ 88ನೇ ವಯಸ್ಸಿನಲ್ಲೂ ಉತ್ಸಾಹವನ್ನು ಬಿಡದೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವೂ ಪ್ರಚಾರ ನಡೆಸಿದ್ದಾರೆ. ದೆಹಲಿಯಲ್ಲಿ ಎಡ ಪಕ್ಷ ನಾಯಕರನ್ನೂ ಬೇಟಿಯಾಗಿದ್ದಾರೆ. ಹಳ್ಳಿಯಲ್ಲಿ ಹುಟ್ಟಿದ ಸಾಮಾನ್ಯ ವ್ಯಕ್ತಿ ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದರು. ಅವರ ಮುಂದಿದ್ದ ಸವಾಲುಗಳೇನಿತ್ತು ಎನ್ನುವ ಕುರಿತು ಎಲ್ಲವನ್ನೂ ಪುಸ್ತಕದಲ್ಲಿ ವಿವರಿಸಲಾಗುತ್ತಿದೆ.

ಈ ಜೀವನ ಚರಿತ್ರೆ ಕುರಿತು ಈ ಹಿಂದೆ ಮಾತನಾಡಿದ್ದ ವೈಎಸ್​ವಿ ದತ್ತಾ, ದೇವೇಗೌಡ ಅವರನ್ನು 1973ರಿಂದಲೂ ಜನತಾ ಪರಿವಾರದಲ್ಲಿ ನಾನು ನೋಡಿಕೊಂಡು ಬಂದಿದ್ದು, ಈ ಪುಸ್ತಕ ಬರೆಯುತ್ತಿದ್ದೇನೆ. ನವೆಂಬರ್​ನಲ್ಲಿ ಇದು ಅಂತಿಮವಾಗಲಿದೆ ಎಂದಿದ್ದರು.a

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top