fbpx
ಸಮಾಚಾರ

ಪುಲ್ವಾಮಾ ದಾಳಿ ಹುತಾತ್ಮ ಯೋಧ ಗುರು ಕುಟುಂಬದ ಜಗಳ- ಬೀದಿಯಲ್ಲೇ ಅತ್ತೆ ಸೊಸೆಯರ ರಂಪಾಟ.

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ವೀರಯೋಧ ಗುರು ಅವರ ಕುಟುಂಬದಲ್ಲಿ ಹಣಕ್ಕಾಗಿ ಮತ್ತೆ ಜಗಳ ಶುರುವಾಗಿದೆ. ಈವರೆಗೆ ನಾಲ್ಕು ಗೋಡೆಗಳ ನಡುವೆ ಇದ್ದ ಜಗಳ ಇದೀಗ ಬೀದಿಗೆ ಬಂದಿದೆ. ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಮತ್ತು ತಾಯಿ ಚಿಕ್ಕೋಳಮ್ಮ ಹಣಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ. ತಾಯಿ ಚಿಕ್ಕತಾಯಮ್ಮ ಮತ್ತು ಪತ್ನಿ ಕಲಾವತಿ ನಡುವೆ ಮನೆ ಮುಂದಿನ ಬೀದಿಯಲ್ಲೇ ಮಂಗಳವಾರ ಸಂಜೆ ಜಗಳವಾಗಿದೆ ಎಂದು ತಿಳಿದುಬಂದಿದೆ.

ಗುರು ಅವರು ಹುತಾತ್ಮರಾದ ಸಂದರ್ಭದಲ್ಲಿ ಸರಕಾರವೇ ಎಲ್ಲ ಜವಾಬ್ದಾರಿ ವಹಿಸಿಕೊಂಡು ಸಕಲ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆಯನ್ನು ನೆರವೇರಿಸಿತ್ತು. ಗುರು ಹುತಾತ್ಮರಾದ ಸಂದರ್ಭದಲ್ಲಿ ಹಲವು ಸಂಘ ಸಂಸ್ಥೆಗಳು, ಉದ್ಯಮಿಗಳು, ಸರಕಾರ, ಸೇನೆ ಸೇರಿ ಹಲವು ಕಡೆಗಳಿಂದ ಪರಿಹಾರದ ರೂಪದಲ್ಲಿ ಆರ್ಥಿಕ ನೆರವಿನ ಮಹಾಪೂರವೇ ಹರಿದುಬಂದಿತ್ತು. ಇದರ ಮೊತ್ತವೇ ಸುಮಾರು 15 ಕೋಟಿ ರು. ಆಗಿದ್ದು ಇದೇ ಜಗಳಕ್ಕೆ ಮೂಲ ಕಾರಣ ಎನ್ನಲಾಗಿದೆ.

ಗುರು ಹೆಸರಿನಲ್ಲಿ ಬಂದಿರುವ ಪರಿಹಾರದ ಹಣದ ಚೆಕ್ ಕಲಾವತಿ ಅಕೌಂಟ್ ನಲ್ಲಿದೆ, ಗುರು ತಮ್ಮನನ್ನ ಮದುವೆಯಾಗಲು ಕಲಾವತಿ ನಿರಾಕರಿಸಿದ ಕಾರಣ ಹಣ ತೆಗೆದುಕೊಳ್ಳಲು ಗುರು ತಾಯಿ ಚಿಕ್ಕೋಳಮ್ಮ ಮುಂದಾಗಿದ್ದಾರೆ, ಹೀಗಾಗಿ ಕಲಾವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಚಿಕ್ಕೋಳಮ್ಮ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ಇಷ್ಟೇ ಅಲ್ಲದೆ ಇತ್ತೀಚೆಗೆ ಕಲಾವತಿಯನ್ನು ಗುರು ತಮ್ಮ ಮಧುವಿಗೆ ಮದುವೆ ಮಾಡಿಕೊಳ್ಳುವುದಾಗಿ ಗುರು ತಾಯಿ ಇರಾದೆ ವ್ಯಕ್ತಪಡಿಸಿದ್ದರಂತೆ.ಇದಕ್ಕೆ ಕಲಾವತಿ ಕುಟುಂಬಕ್ಕೆ ಸಾಕಷ್ಟುವಿರೋಧವಿತ್ತು. ಇಂದು ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಜಗಳ ನಡೆಯುತ್ತಿತ್ತು. ಜಗಳದ ವೇಳೆ ಕಲಾವತಿ ಪೋಷಕರು ಸಾಸಲಪುರದಿಂದ ಕಾರಿನಲ್ಲಿ ಬಂದು ಮಗಳನ್ನು ಕರೆದೊಯ್ದರು ಎನ್ನಲಾಗಿದೆ.

ತನಗೆ ಗುರುವಿನ ತಾಯಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಲಾವತಿ ಆರೋಪಿಸಿದ್ದಾರೆ, ಇದೇ ವೇಳೆ ಸಚಿವ ಡಿ,ಸಿ ತಮ್ಮಣ್ಣ ಮತ್ತು ಅವರ ಬೆಂಬಲಿಗರು ಮಧ್ಯ ಪ್ರವೇಶಿಸಿ ಬುದ್ದಿವಾದ ಹೇಳಿದ್ದಾರೆ, ಹಣಕ್ಕಾಗಿ ಈ ರೀತಿ ಕಚ್ಚಾಡುತ್ತಿದ್ದರೇ ಹುತಾತ್ಮ ಯೋಧ ಗುರುವಿನ ವರ್ಚಸ್ಸು ಹಾಳಾಗುತ್ತದೆ ಎಂದು ಹೇಳಿದ್ದಾರೆ, ಅತ್ತೆ ಸೊಸೆಯರ ಜಗಳದಿಂದ ಅಸಮಾಧಾನಗೊಂಡಿರುವ ಗ್ರಾಮಸ್ಥರು ಪಂಚಾಯಿತಿ ಸೇರಿಸಿ, ಶಾಂತಿಯಿಂದ ಜೀವನ ನಡೆಸುವಂತೆ ಸಲಹೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top