fbpx
ಸಮಾಚಾರ

ಮಂಡ್ಯ ಚುನಾವಣೆ ಕುರಿತು ಗುಪ್ತಚರ ವರದಿ: ಮೂವರು ಶಾಸಕರಿಗೆ ಸಿಎಂ ಫುಲ್ ಕ್ಲಾಸ್.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಇಡೀ ಇಂಡಿಯಾವೇ ಮಂಡ್ಯ ಮೇಲೆ ಕಣ್ಣು ನೆಟ್ಟಿತ್ತು. ಅದರಂತೆ ಮಂಡ್ಯದಲ್ಲಿ ದಾಖಲೆಯ ಶೇಕಡ 80ರಷ್ಟು ಮತದಾನ ಕೂಡ ಆಗಿದೆ. ಮತದಾನ ನಂತರ ಮಂಡ್ಯದಲ್ಲಿ ಹಲವಾರು ಬೆಳವಣಿಗೆಗಳು ಮಂಡ್ಯದಲ್ಲಿ ನಡೆದಿದೆ.

ಹೈವೋಲ್ಟೇಜ್ ಮಂಡ್ಯ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲ್ತಾರಾ ಅನ್ನೋ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ. ಯಾಕಂದ್ರೆ ಮಂಡ್ಯ ವ್ಯಾಪ್ತಿಯ ಮೂವರು ಶಾಸಕರಿಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.

ಗುಪ್ತಚರ ವರದಿಯಲ್ಲಿ ಮಂಡ್ಯ, ಮಳವಳ್ಳಿ, ಮದ್ದೂರು ಕ್ಷೇತ್ರಗಳಲ್ಲಿ ಜೆಡಿಎಸ್​ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಆ ಮೂರು ಕ್ಷೇತ್ರದ ಶಾಸಕರಾದ ಶ್ರೀನಿವಾಸ್​, ಅನ್ನದಾನಿ ಮತ್ತು ಡಿ.ಸಿ. ತಮ್ಮಣ್ಣ ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ನಿಖಿಲ್​ಗೆ ಹಿನ್ನಡೆಯಾದರೆ ಅದಕ್ಕೆ ನೀವೇ ಹೊಣೆ ಎಂದು ಖಡಕ್​ ಆಗಿ ತಿಳಿಸಿದ್ದಾರೆ ಎಂದು ಕನ್ನಡ ಮಾಧ್ಯಮಗಳು ವರದಿ ಮಾಡಿವೆ.

ಅಂದಹಾಗೆ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ತೀವ್ರವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಹಾಗೆಂದು ಅವರಿಗೆ ಮಂಡ್ಯದಲ್ಲಿನ ಗೆಲುವು ಸುಲಭವಲ್ಲ. ಅವರ ಎದುರು ಇರುವುದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಷ್. ಅವರಿಗೆ ಬಿಜೆಪಿಯ ಬೆಂಬಲ ದೊರಕಿದೆ. ಕಾಂಗ್ರೆಸ್‌ನ ಅತೃಪ್ತ ಮುಖಂಡರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇಲ್ಲಿ ನಿಕಟ ಪೈಪೋಟಿ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top