fbpx
ಸಮಾಚಾರ

ಆಲೂಗಡ್ಡೆ ಬೆಳೆದ ರೈತರನ್ನೇ ಕೋರ್ಟಿಗೆಳೆದ ಪೆಪ್ಸಿಕೋ ಕಂಪನಿ ವಿರುದ್ಧ ಅಭಿಯಾನ.

ಪೆಪ್ಸಿಕೋ ಕಂಪನಿ ವಿಶೇಷ ಹಕ್ಕು ಹೊಂದಿರುವ ಆಲೂಗಡ್ಡೆಯ ತಳಿಯೊಂದನ್ನು ಬೆಳೆದು ಮಾರುತ್ತಿರುವ ಗುಜರಾತ್​ನ ಕೆಲ ರೈತರ ವಿರುದ್ಧ ಆ ಸಂಸ್ಥೆಯು ಮೊಕದ್ದಮೆ ಹೂಡಿರುವ ವಿಚಾರ ಬೆಳಕಿಗೆ ಬಂದಿದೆ. ತನ್ನ ಅನುಮತಿ ಇಲ್ಲದೇ ಅಕ್ರಮವಾಗಿ ಇದನ್ನು ಬೆಳೆಯಲಾಗುತ್ತಿದೆ. ಇದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಗುಜರಾತ್​ನ ಸಬರ್​ಕಾಂತ ಮತ್ತು ಆರವಳ್ಳಿ ಜಿಲ್ಲೆಗಳ 9 ರೈತರ ಮೇಲೆ ಪೆಪ್ಸಿಕೋ ಸಂಸ್ಥೆ ಕೇಸ್ ದಾಖಲಿಸಿದೆ.

ತನ್ನ ಲೇಸ್ ಆಲಗೂಡ್ಡೆ ಚಿಪ್ಸ್‌ಗಾಗಿ ಬೆಳೆಯುವ ವಿಶಿಷ್ಟ ತಳಿಯ ಆಲೂಗಡ್ಡೆಯನ್ನು ರೈತರು ತಮ್ಮ ಲಾಭಕ್ಕಾಗಿ ಬೆಳೆದಿದ್ದಾರೆ ಎಂಬುದು ಪೆಪ್ಸಿ ಕಂಪನಿಯ ಆರೋಪವಾಗಿದೆ. ಆದರೆ ಪೆಪ್ಸಿ ಕಂಪನಿ ನಡೆಯಿಂದ ಕೆಂಡಾಮಂಡಲವಾಗಿರುವ ಭಾರತೀಯ ಕಿಸಾನ್ ಸಂಘ, ರೈತ ಏನು ಬೆಳೆಯಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಕಿಡಿಕಾರಿದೆ. ಅಲ್ಲದೇ ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಕ್ಕು ಕಾಪಾಡಬೇಕು ಎಂದು ಆಗ್ರಹಿಸಿದೆ.

ಈ ರೈತರನ್ನು ಕೋರ್ಟ್‌ಗೆ ಎಳೆದಿರುವುದು ದೈತ್ಯ ಕಂಪೆನಿ ಪೆಪ್ಸಿಕೋ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಆಘಾತ ಉಂಟುಮಾಡಿರುವ ಕಂಪೆನಿ ವಿರುದ್ಧ ರೈತ ಪರ ಮನಸ್ಸುಗಳು ಸಿಡಿದೆದ್ದಿವೆ. ರೈತರನ್ನು ಉಳಿಸಲು ಪೆಪ್ಸಿಕೋ ಮತ್ತು ಲೇಸ್ ಬಹಿಷ್ಕರಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ. ಸಂಸದ ಜಿಸಿ ಚಂದ್ರಶೇಖರ್ ಅವರು ಕೂಡ ಈ ಬಗ್ಗೆ ಟ್ವೀಟ್ ರೈತರ ಬೆಂಬಲಕ್ಕೆ ನಿಂತಿದ್ದಾರೆ.

 

 

#WeDontWantThisJunk #BoycottPepsi #BoycottLays #StandWithFarmers #UnitedForOurselves ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭಿಸಲಾಗಿದೆ. ಭಾರತೀಯ ಕುಲಾಂತರಿ ವಿರೋಧಿ ಮೈತ್ರಿಕೂಟ ಈ ಅಭಿಯಾನದ ನೇತೃತ್ವ ವಹಿಸಿದೆ. ಇದಕ್ಕೆ ಅನೇಕ ರೈತ ಸಂಘಟನೆಗಳು ಕೈಜೋಡಿಸಿದ್ದು, ಪೆಪ್ಸಿಕೋದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top