fbpx
ಸಮಾಚಾರ

ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್ ಆಗಿ ಇತಿಹಾಸ ನಿರ್ಮಿಸಿದ​​​ ಕ್ಲೇರ್​​​​​​​ ಪೊಲೊಸಾಕ್​​​.

ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಆಯ್ಕೆಯಾಗುವ ಮೂಲಕ ಕ್ಲೈರ್‌ ಪೊಲೊಸಾಕ್‌ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆ ಆಸೀಸ್‍ನ 31 ವರ್ಷದ ಕ್ಲೈರ್ ಪೊಲೊಸಾಕ್ ಅವರಿಗೆ ಲಭಿಸಿದೆ.

ಆ ಮೂಲಕ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಕೀರ್ತಿಗೆ ಕ್ಲೈರ್‌ ಪೊಲೊಸಾಕ್‌ ಭಾಜನರಾಗಿದ್ದಾರೆ. ನಮೀಬಿಯಾ ಹಾಗೂ ಓಮನ್‌ ನಡುವಿನ ವಿಶ್ವ ಕ್ರಿಕೆಟ್‌ ಲೀಗ್‌ ಎರಡನೇ ಡಿವಿಷನ್‌ ಫೈನಲ್‌ ಪಂದ್ಯದಲ್ಲಿ ಕ್ಲೈರ್‌ ಪೊಲೊಸಾಕ್‌ ಅವರು ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಪುರುಷರ ಏಕದಿನ ಪಂದ್ಯದಲ್ಲಿ ಸೇವೆ ಸಲ್ಲಸಿದ ವಿಶ್ವದ ಮೊದಲ ಮಹಿಳಾ ಅಂಪೈರ್‌ ಎಂಬ ಕೀರ್ತಿಗೆ ಆಸ್ಟ್ರೇಲಿಯಾದ ಕ್ಲೈರ್ ಭಾಜನರಾಗಲಿದ್ದಾರೆ.

 

 

ಈ ಕುರಿತು ಮಾತನಾಡಿದ ಪೊಲೊಸಾಕ್​​​​​​​​​​​​​​​ ನಾನು ಇದುವರೆಗೂ ಯಾವುದೇ ಹಂತದ ಕ್ರಿಕೆಟ್​​ ಆಡಿಲ್ಲ. ಆದರೆ, ವೀಕ್ಷಣೆ ಮಾಡಲು ಬಹಳ ಆಸಕ್ತಿಯಿತ್ತು. ಇದರಿಂದ ನನ್ನ ತಂದೆ ಅಂಪೈರ್​​​​​​​​​​​​​ ಕೋರ್ಸ್​ಗೆ ಸೇರಿಸಿದರು. ಹಲವು ಬಾರಿ ಅಂಪೈರ್​​​​​ ಪರೀಕ್ಷೆಗಳಲ್ಲಿ ಅನುತೀರ್ಣಗೊಂಡಿದ್ದೆ. ಆದರೆ, ಈಗ ಅಂತರಾಷ್ಟ್ರೀಯ ಪಂದ್ಯಗಳಿಗೆ ತೀರ್ಪುಗಾರ್ತಿಯಾಗಿ ಆಯ್ಕೆಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಅಂದಹಾಗೇ ದೇಶಿಯ ಕ್ರಿಕೆಟ್ ಪುರುಷರ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ ಅನುಭವವನ್ನು ಕ್ಲೈರ್ ಪೊಲೊಸಾಕ್ ಹೊಂದಿದ್ದು, 2017 ರಲ್ಲಿ ಆಸ್ಟ್ರೇಲಿಯಾ ದೇಶೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಐಸಿಸಿ ಟಿ-20 ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐಸಿಸಿ ಅಧಿಕೃತ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top