fbpx
ಸಮಾಚಾರ

ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಗೆ ಸಂಕಷ್ಟ- FIR ದಾಖಲು.

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅನುಮತಿ ಪಡೆಯದೆ ಎರಡು ಕಡೆ ರ್ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಎಫ್‍ಐಆರ್ ದಾಖಲಿಸುವಂತೆ ಆದೇಶಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಆದೇಶದ ಮೇರೆಗೆ ದೆಹಲಿ ಪೊಲೀಸರು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ನಲ್ಲಿ ಟೀಕೆ ವ್ಯಕ್ತಪಡಿಸಿದ ಎಎಪಿ ಅಭ್ಯರ್ಥಿ ಅತಿಶಿ, ಮೊದಲು ಅವರ ನಾಮಪತ್ರ ಗೊಂದಲದಿಂದ ಕೂಡಿತು. ಬಳಿಕ ಎರಡು ಮತದಾರರ ಚೀಟಿ ಹೊಂದಿದ್ದ ಅವರು ಕಾನೂನು ಉಲ್ಲಂಘನೆ ಮಾಡಿದ್ದರು. ಈಗ ಅಕ್ರಮವಾಗಿ ರ‍್ಯಾಲಿ ನಡೆಸಿದ್ದಾರೆ. ಆಟ ಆಡುವ ನಿಮಗೆ ಯಾಕೆ ನಿಯಮಗಳ ಬಗ್ಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ದೀರ್ಘ ಸಮಯದಿಂದ ಬಿಜೆಪಿಯನ್ನು ಸಮರ್ಥಿಸುತ್ತಿರುವ ಗೌತಮ್ ಗಂಭೀರ್ ಕಳೆದ ತಿಂಗಳಷ್ಟೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಗೌತಮ್ ಗಮಭೀರ್ ರನ್ನು ಕಣಕ್ಕಿಳಿಸಿದೆ.

ಬಿಜೆಪಿ ಅಭ್ಯರ್ಥಿ ಗಂಭೀರ್‌ ಬಳಿ 2 ವೋಟರ್‌ ಐಡಿ?
ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಎರಡು ಕಡೆಗಳಲ್ಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ಆಪ್‌ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಗಂಭೀರ್‌ ದೆಹಲಿಯ ಕರೋಲ್‌ ಭಾಗ್‌ ಮತ್ತು ರಾಜೀಂದ್ರ ನಗರಗಳಲ್ಲಿ ಎರಡು ವೋಟರ್‌ ಐಡಿ ಹೊಂದಿದ್ದಾರೆ. ಈ ಕುರಿತು ತಮ್ಮ ಪ್ರಮಾಣಪತ್ರದಲ್ಲಿ ಮರೆಮಾಚಿದ್ದಾರೆ ಎಂದು ಆಪ್‌ ನಾಯಕಿ ಅತಿಶಿ ಸುದ್ದಿಗೋಷ್ಠಿಯ ವೇಳೆ ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top