fbpx
ಸಮಾಚಾರ

ವಿಲಿಯರ್ಸ್ ದಂಪತಿಯ ಮುಂದಿನ ಮಗುವಿಗೆ ‘ಕರ್ನಾಟಕ’ ಎಂದು ಹೆಸರಿಡಲು ನಿರ್ಧರಿಸಿದ್ದರಂತೆ.

ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಹೀನಾಮಾನ ಬ್ಯಾಟಿಂಗ್ ನಡೆಸಿ ಎದುರಾಳಿಗಳ ಸೊಲ್ಲು ಅಡಗಿಸುವ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಎಬಿ ಡಿ ವಿಲಿಯರ್ಸ್ ಕೇವಲ ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ.. ಭಾರತದಲ್ಲಂತೂ ಅವರ ಅಭಿಮಾನಿಗಳು ಜಾಸ್ತಿಯೇ ಇದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಮಿ. 360 ರಾಜ್ಯವನ್ನ ಅತಿ ಹೆಚ್ಚು ಪ್ರೀತಿಸುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಎಬಿಡಿ ವಿಲಿಯರ್ಸ್ ತಮ್ಮ ಮಗುವಿಗೆ ಕರ್ನಾಟಕ ಎಂದು ಹೆಸರು ಇಡಲು ಯೋಚಿಸಿದ್ದರಂತೆ. ಹೌದು, ಈ ರೀತಿ ಸ್ವತಃ ವಿಲಿಯರ್ಸ್ ಅವರೇ ಹೇಳಿಕೊಂಡಿದ್ದು ಅವರು ಹೇಳಿರುವ ಒಂದು ವರ್ಷದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹರಿದಾಡುತ್ತಿದೆ.

ಖಾಸಗಿ ಸಂದರ್ಶದಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್‌ “ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಸಾಕ್ಷಿಯಾಗಿ ತಮ್ಮ ಮೂರನೇ ಮಗುವಿಗೆ ‘ಕರ್ನಾಟಕ’ ಎಂದು ಹೆಸರು ಇಡಲು ನಿರ್ಧಾರ ಮಾಡಿದ್ದೆವು.. ಆದರೆ ಸದ್ಯ ‘ತಾಜ್’ ತಾಜ್‌ ಡಿವಿಲಿಯರ್ಸ್‌ ಎಂದು ನಾಮಕರಣ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

2012ರಲ್ಲಿ ಐಪಿಎಲ್​​​​​​​​​​​​​​​​​ ಆಡುವುದಕ್ಕೆ ಇಂಡಿಯಾಕ್ಕೆ ಬಂದಿದ್ದ ಎಬಿಡಿ, ತಮ್ಮ ಗೆಳತಿ ಡೆನಿಯೆಲ್​​​​ ಅನ್ನ ತಾಜ್​​​​ಮಹಲ್​​​​​ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ತಾಜ್​​ಮಹಲ್​​​​​​​​​​​​ನ ಹಿಂದೆ ಲವ್ ಪ್ರಪೋಸ್ ಮಾಡಿದ್ದರು. ಇದಕ್ಕೆ ಡೆನಿಯೆಲ್ ಕೂಡ ಓಕೆ ಎಂದಿದ್ದರು. ಇದಾದ ಬಳಿಕ 2013ರಲ್ಲಿ ಎಬಿಡಿ ಹಾಗೂ ಡೆನಿಯೆಲ್​​ ಸಪ್ತಪದಿ ತುಳಿದಿದ್ದರು. ನಂತರ ಡೆನಿಯೆಲ್ 2015ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. 2017 ಆಗಸ್ಟ್​​ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಮೊದಲು ಕರ್ನಾಟಕ ಎಂದು ಹೆಸರಿಟ್ಟಿದ್ದರು. ಬಳಿಕ ಅದನ್ನ ತಾಜ್​​​​ ಹೆಸರಿಗೆ ಬದಲಾಯಿಸಿದ್ದಾರೆ.

ಎಬಿ ಡಿವಿಲಿಯರ್ಸ್‌ ಈಗಾಗಲೇ ಬೆಂಗಳೂರು ನನ್ನ ಎರಡನೇ ತವರೂರು ಎಂದು ಈ ಹಿಂದೆ ಹೇಳಿಕೆ ನೀಡಿರುವುದು ಗಮನಾರ್ಹ. ಡಿವಿಲಿಯರ್ಸ್ ದಂಪತಿಗಳ ಮೊದಲ ಮಗನ ಹೆಸರು ಜೂನಿಯರ್ ಎಬಿಡಿ ಹಾಗು ಎರಡನೇ ಮಗನ ಹೆಸರು ಜಾನ್ ರಿಚರ್ಡ್ ಎಂದು ಇಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top