fbpx
ಸಮಾಚಾರ

1 ಮತ ಹಾಕಿದ್ರೆ ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಓಲೆ ಮತ್ತು 25000 ಕ್ಯಾಷ್.

ದೇಶಾದ್ಯಂತ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದರೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ ಮಂಡಳಿ (ಶಿಮುಲ್) ಚುನಾವಣೆಯ ಕಾವು ಅದನ್ನೂ ಮೀರಿಸಿದೆ. ಹೌದು ಶಿವಮೊಗ್ಗ ಹಾಲು ಒಕ್ಕೂಟ ಮಂಡಳಿ (ಶಿಮುಲ್)ಚುನಾವಣೆಗೆ ಇಂದು ಮತದಾನ ನಡೆಯುತ್ತಿತ್ತು ಒಂದು ಮತಕ್ಕೆ ಭಾರಿ ಆಮಿಷ ಒಡ್ಡುತ್ತಿರುವ ಘಟನೆ ನಡೆದಿದೆ.

ಶಿವಮೊಗ್ಗದ ಮಾಚೇನಹಳ್ಳಿ ಯಲ್ಲಿರುವ ಶಿಮುಲ್ ಕಚೇರಿಯಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬಿಜೆಪಿ ಬೆಂಬಲಿತ ಮತ್ತು ಜೆಡಿಎಸ್ ಬೆಂಬಲಿತ ಬಣಗಳ ಮಧ್ಯೆ ಭಾರೀ ಸ್ಪರ್ಧೆಯಿದೆ. ಇನ್ನು ಮತ ಹಾಕಲು ಆಮಿಷ ಒಡ್ಡಲಾಗಿದೆ ಎನ್ನಲಾಗುತ್ತಿದೆ. ಒಂದು ಮತಕ್ಕೆ ₹ 25 ಸಾವಿರ, ಪುರುಷರಿಗೆ ಚಿನ್ನದ ಉಂಗುರ ಹಾಗೂ ಮಹಿಳೆಯರಿಗೆ ಚಿನ್ನದ ಓಲೆ, ಒಂದು ಬೆಳ್ಳಿ ನಾಣ್ಯ ನೀಡಲಾಗುತ್ತಿದೆ ಎಂದು ವಾಟ್ಸ್‌ಪ್‌ನಲ್ಲಿ ವೈರಲ್ ಆಗಿದೆ.

14 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ 31 ಅಭ್ಯರ್ಥಿಗಳಿದ್ದಾರೆ. ಒಟ್ಟು 835 ಸದಸ್ಯರ ಮತಗಳಿರುವ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಆಮಿಷವನ್ನು ಅಭ್ಯರ್ಥಿಗಳು ಮತದಾರರಿಗೆ ಒಡ್ಡಿದ್ದಾರೆ. ಶಿಮುಲ್ ಆಡಳಿತ ಮಂಡಳಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯನ್ನೊಳಗೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top